<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಎಸ್ ಐ ಆರ್ ಫಾರಂ ತುಂಬುವ ಕುರಿತು ಆಯುಕ್ತ ಮಾಯಣ್ಣ ಗೌಡರಿಂದ ಪ್ರಾತ್ಯಕ್ಷಿಕೆ
filter: 0; fileterIntensity: 0.8; filterMask: 0; module: photo; hw-remosaic: false; touch: (-1.0, -1.0); modeInfo: HDR ; sceneMode: 2; cct_value: 0; AI_Scene: (-1, -1); aec_lux: 258.68268; aec_lux_index: 0; hist255: 0.0; hist252~255: 0.0; hist0~15: 0.0; motionLevel: -1; weatherinfo: null;

Banner Ad
ಎಸ್ ಐ ಆರ್ ಫಾರಂ ತುಂಬುವ ಕುರಿತು ಆಯುಕ್ತ ಮಾಯಣ್ಣ ಗೌಡರಿಂದ ಪ್ರಾತ್ಯಕ್ಷಿಕೆ

ಶಿವಮೊಗ್ಗ:- ಎಸ್ ಐ ಆರ್ ಫಾರಂ ತುಂಬುವ ಕುರಿತು ಜನರಲ್ಲಿ ಅಡಗಿರುವ ಅನಗತ್ಯ ಸಮಸ್ಯೆಯ ಕುರಿತು ಸುಲಭವಾಗಿ ಫಾರಂ ತುಂಬುವ ರೀತಿಯನ್ನು ಫಾರಂ ಹಿಡಿದು ಮತದಾರ ನಾಗರಿಕರಿಗೆ ಹಾಗೂ ಬಿ ಎಲ್ ಓ,  ಬಿ ಎಲ್ ಎ ಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ಪ್ರಾತ್ಯಕ್ಷಿಕೆ ನೀಡಿದರು.
ಅವರು ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಶಿವಮೊಗ್ಗ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ -113- ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 7ರ ಮಾಹಿತಿ ನೀಡುವ ಸೌಲಭ್ಯ ಕೇಂದ್ರ ಆದ ನಾಗಲಿಂಗೇಶ್ವರ ಸಭಾ ಭವನದಲ್ಲಿ ಸಾಮಾನ್ಯ ಬೇಟಿ ನೀಡಿದಾಗ ಆಯುಕ್ತರು ಮಾಹಿತಿ ನೀಡಿದ್ದಾರೆ. ಇದೇ ಸಮಯದಲ್ಲಿ ವಾರ್ಡಿನ ಬಿ ಎಲ್ ಓ ಮತ್ತು ಬಿ ಎಲ್ ಎ ಅವರನ್ನು ಕರೆಸಿ ಒಂದು ಸಾವಿರಕ್ಕೂ ಹೆಚ್ಚು ಮತದಾರರ ಯಾದಿವುಳ್ಳವರಿಗೆ ಸಹಾಯಕರನ್ನು ಹೆಸರಿಸಿದರಲ್ಲದೆ ಕಾರ್ಯ ಪೂರ್ತಿ ನಿರ್ವಹಿಸಲು ಆಗದೇ ಇದ್ದವರಿಗೆ ಕಾನೂನು ಶಿಕ್ಷಾ ಮಾಹಿತಿ ಏನು ಎಂಬುದನ್ನು ವಿವರಿಸಿದರು.
ಫಾರಂ ನ ಮೇಲಿನ ಎಡ ಮತ್ತು ಬಲ ಕಾಲಂ ಮಾಹಿತಿ ಗೊತ್ತಾಗದಿದ್ದಲ್ಲಿ ಫಾರಂ ಕೆಳಗಿನ ಕಾಲಂ ತುಂಬಿ ಸಹಿ ಮಾಡಿ ಕೊಟ್ಟರೆ ಸಾಕು. ಫಾರಂ ಕೊಟ್ಟ ನಂತರ ಬೇರೆ ಮಾಹಿತಿ ಬೇಕಾದಲ್ಲಿ ಆಗಸ್ಟ್ 5 ರ ನಂತರ ಮತದಾರರನ್ನು ಕೇಳಲಾಗುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ನವೆಂಬರ್ ತಿಂಗಳಲ್ಲಿ ಹೊಸ ಕಾರ್ಡ್ ವಿತರಣೆಯಾಗುತ್ತದೆ ಎಂದ ಆಯುಕ್ತರು ಇತ್ತೀಚೆಗೆ 18 ವರ್ಷ ಮೇಲ್ಪಟ್ಟ ಹೊಸದಾಗಿ ಮತದಾನ ಮಾಡುವವರಿಗೆ ಫಾರಂ 6 ನೀಡಲಾಗುತ್ತದೆ ಎಂದರು.
ಬಿ ಎಲ್ ಓ ಗಳು ಒಂದು ಕಡೆ ಕೂಡದೆ ನಾಗರಿಕರ ಬಳಿ ಹೋಗಿ ಮಾಹಿತಿ ಕಲೆ ಹಾಕಿ ಜುಲೈ 29 ರೊಳಗೆ ಕಾರ್ಯ ಮುಗಿಸಬೇಕು ಇದಕ್ಕೆ ಎಲ್ಲಾ ಸೌಕರ್ಯ ನೀಡಿದೆ ಅಂತಿಮದಲ್ಲಿ ಕೆಲಸ ಮಾಡಲು ಹೋಗ ಬೇಡಿ ಸರ್ವರ್ ಬಿಝಿ ಆಗಿರುತ್ತದೆ ಎಂದು ಎಚ್ಚರಿಸಿದರು.
Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *