<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ರಾಷ್ಟ್ರಭಕ್ತರ ಬಳಗದ ಕಾರ್ಯ ನಿಜಕ್ಕೂ ಶ್ಲಾಘನೀಯ : ಬೆಕ್ಕಿನ ಕಲ್ಮಠ ಶ್ರೀ

Banner Ad
ರಾಷ್ಟ್ರಭಕ್ತರ ಬಳಗದ ಕಾರ್ಯ ನಿಜಕ್ಕೂ ಶ್ಲಾಘನೀಯ : ಬೆಕ್ಕಿನ ಕಲ್ಮಠ ಶ್ರೀ

ವಮೊಗ್ಗ :- ನಮ್ಮ ತನವನ್ನು ನಾವು ಉಳಿಸಿಕೊಳ್ಳಬೇಕಾದರೆ ಸಂವಿಧಾನದತ್ತ ಹಕ್ಕು ಮತ್ತು ಜವಾಬ್ದಾರಿಯನ್ನು ನಿಭಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.

ಅವರು ಇಂದು ಬೊಮ್ಮನಕಟ್ಟೆಯಲ್ಲಿ ರಾಷ್ಟ್ರಭಕ್ತರ ಬಳಗವು ಗೋವರ್ಧನ್ ಟ್ರಸ್ಟ್‌ನ ಸಹಯೋಗದಲ್ಲಿ ಓಂಶಕ್ತಿ ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರನೇ ಮತದಾರರ ಸಹಾಯ ಕೇಂದ್ರ ವಿಶೇಷ ಪರಿಷ್ಕರಣಾ ಉದ್ಘಾಟನಾ ಸಮಾರಂಭ-ಎಸ್‌ಐಆರ್ ಎನ್ಯೂಮರೇಷನ್ ಫಾರಂ ತುಂಬುವ ವಿಧಾನದ ಬಗ್ಗೆ ಜಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ ರಾಷ್ಟ್ರ ಭಕ್ತರ ಬಳಗದ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು, ಈ ದೇಶದ ಪ್ರಜೆಯಾಗಿ ಇಲ್ಲಿ ಎಲ್ಲರಿಗೂ ಜೀವಿಸುವ ಹಕ್ಕಿದೆ. ಅರ್ಹ ಎಲ್ಲರಿಗೂ ಮತದಾನದ ಹಕ್ಕಿದೆ. ಅದರಿಂದ ಯಾರೂ ವಂಚಿತರಾಗಬಾರದು. ಹಕ್ಕುಗಳನ್ನು ಪಡೆಯಲು ಜವಾಬ್ದಾರಿ ನಿಭಾಯಿಸುವುದು ಮುಖ್ಯವಾಗುತ್ತದೆ. ಇಲ್ಲವಾದರೆ ಲೆಕ್ಕಕ್ಕೂ ಇಲ್ಲ, ಬುಕ್ಕಲ್ಲೂ ಇಲ್ಲ ಎನ್ನುವಂತ್ತಾಗುತ್ತದೆ. ಇವೆರಡಕ್ಕೂ ಇರಬೇಕು ಎಂದಾದರೆ ಹಕ್ಕು ಮತ್ತು ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗುತ್ತದೆ ಎಂದರು.

ಎಸ್‌ಐಆರ್ ಬಗ್ಗೆ ಕೆಲವರು ಸುಖಾಸುಮ್ಮನೆ ಗೊಂದಲ ಎಬ್ಬಿಸುತ್ತಿದ್ದಾರೆ. ಇದರಲ್ಲಿ ಯಾವ ಗೊಂದಲವೂ ಇಲ್ಲ. ಪ್ರತಿಯೊಬ್ಬ ಅರ್ಹ ಮತದಾರ ತನ್ನ ಹೆಸರನ್ನು ಮತಪಟ್ಟಿಯಲ್ಲಿ ದೃಡಪಡಿಸಿಕೊಳ್ಳಲು ಇದೊಂದು ಸದಾವಕಾಶ. ಇದರ ಸದುಪಯೋಗವನ್ನು ಪ್ರತಿಯೊಬ್ಬ ಭಾರತೀಯನೂ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ರಾಷ್ಟ್ರಭಕ್ತರ ಬಳಗದ ಅಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಎಸ್‌ಐಆರ್‌ನಲ್ಲಿ ಪಾಲ್ಗೊಳ್ಳದಿದ್ದರೆ ಮತದಾನದ ಹಕ್ಕನ್ನೇ ಕಳೆದುಕೊಳ್ಳುತ್ತೇವೆ. ಬೊಮ್ಮನಕಟ್ಟೆಯ ಓಂಶಕ್ತಿ ಗೆಳೆಯರ ಬಳಗ ಈ ನಿಟ್ಟಿನಲ್ಲಿ ಸ್ಥಳೀಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಸ್‌ಐಆರ್ ಮಾಹಿತಿ ಕೇಂದ್ರವನ್ನು ತೆರೆಯುವಂತೆ ಮನವಿ ಮಾಡಿದರು.

ಯುವ ಮುಖಂಡ ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿದರು. ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಈ.ವಿಶ್ವಾಸ್, ಮೋಹನ್ ಜದವ್, ಡಾ.ರೇಣುಕಾರಾಧ್ಯ, ಹನುಮಂತಪ್ಪ, ಮಂಜು, ಶಿವಾಜಿ, ರಾಜು, ಅನಿತಾ ಮುಂಜುನಾಥ್, ಗೌರಮ್ಮ, ಕೆಂಪಮ್ಮ, ಮಂಜುಳಾ ಪಾಂಡೆ, ವಿನುತ ಮೊದಲಾದವರಿದ್ದರು.=ಘಿ

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *