<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಮೊಬೈಲ್-ಡಿಜಿಟಲ್ ಯುಗದಲ್ಲಿ ವೇಗಕ್ಕಿಂತ ವಿಶ್ವಾಸಾರ್ಹತೆ ಮುಖ್ಯ : ಬಿ.ವೈ. ರಾಘವೇಂದ್ರ

Banner Ad
ಮೊಬೈಲ್-ಡಿಜಿಟಲ್ ಯುಗದಲ್ಲಿ ವೇಗಕ್ಕಿಂತ ವಿಶ್ವಾಸಾರ್ಹತೆ ಮುಖ್ಯ : ಬಿ.ವೈ. ರಾಘವೇಂದ್ರ

ಭದ್ರಾವತಿ :- ಇಂದಿನ ಮೊಬೈಲ್ ಹಾಗೂ ಡಿಜಿಟಲ್ ಯುಗದಲ್ಲಿ ಸುದ್ದಿಯ ವೇಗಕ್ಕಿಂತ ಅದರ ‘ವಿಶ್ವಾಸಾರ್ಹತೆ’ ಅತ್ಯಂತ ಮುಖ್ಯವಾಗುತ್ತದೆ. ಸತ್ಯ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಯೇ ಪ್ರತಿಯೊಬ್ಬ ಪತ್ರಕರ್ತರ ಧೇಯವಾಗಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರಆಶಿಸಿದರು.

ಇಂದು ಭದ್ರಾವತಿಯ ಲಯನ್ಸ್ ಕ್ಲಬ್ ಸಭಾಂಗಣದ ‘ಡಿ.ವಿ.ಗುಂಡಪ್ಪ ವೇದಿಕೆ’ಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ, ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಪತ್ರಿಕಾ ದಿನಾಚರಣೆಯ ಸವಿನೆನಪಿನಲ್ಲಿ ಸಮಾಜಮುಖಿ ಕಾರ್ಯವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಸಂಗತಿ ಎಂದ ಅವರು, ಲೇಖನಿಯ ಮೂಲಕ ಸಮಾಜದ ಕುಂದು ಕೊರತೆಗಳಿಗೆ ಚಿಕಿತ್ಸೆ ನೀಡುವ ಪತ್ರಕರ್ತರು, ರಕ್ತದಾನದ ಮೂಲಕ ಜೀವ ಉಳಿಸುವ ಸಂಕಲ್ಪ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ದಶಕಗಳ ಕಾಲ ಸಮಾಜದ ಕಣ್ಣಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ವೈದ್ಯನಾಥ್, ರಾಜ್ಯ ಪ್ರತಿನಿಧಿ ಟೆಲೆಕ್ಸ್ ರವಿಕುಮಾರ್, ಸಂಘದ ತಾಲೂಕು ಅಧ್ಯಕ್ಷ ಗಂಗ್ಯಾನಾಯ್ಕ, ಪ್ರಮುಖರಾದ ಮೋಹನ್, ಮಂಗೋಟೆ ರುದ್ರೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *