ಶಿವಮೊಗ್ಗ :- ಪತ್ರಿಕಾ ಮತ್ತು ನಾಡಿನ ಖ್ಯಾತ ವನ್ಯಜೀವಿ ಛಾಯಾಗ್ರಾಹಕರ ಲ್ಲೋರ್ವರಾದ ಶಿವಮೊಗ್ಗ ನಾಗರಾಜ್ (ಪ್ರಜಾವಾಣಿ ಫೋಟೋಗ್ರಾಫರ್) ಅವರು ಸೆರೆ ಹಿಡಿದ ಅಪರೂಪದ ಛಾಯಾಚಿತ್ರ ಗಳ ಪ್ರದರ್ಶನವು ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಮಾ. 13 ಮತ್ತು 14 ರಂದು ಜರುಗಲಿರುವ ೨೦ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ದಲ್ಲಿ ಪ್ರದರ್ಶನಗೊಳ್ಳಲಿದೆ.

ಶಿವಮೊಗ್ಗ ನಾಗರಾಜ್ ರವರು ವಿಭಿನ್ನ ಆಯಾಮ ಕೋನಗಳಲ್ಲಿ ಛಾಯಾಚಿತ್ರಗಳನ್ನು ತೆಗೆಯುವಲ್ಲಿ ಅಪಾರ ಪರಿಶ್ರಮ ಹೊಂದಿದ್ದಾರೆ. ಸುದ್ದಿಚಿತ್ರಗಳ ಜೊತೆಯಲ್ಲಿಯೇ ವಿಶೇಷ ಚಿತ್ರಗಳನ್ನು ಸೆರೆಹಿಡಿ ಯುವಲ್ಲಿ ಪರಿಣಿತಿ ಸಾಧಿಸಿದ್ದಾರೆ. ನಾಗರಾಜ್‌ರವರು, ತಮ್ಮ ಕ್ರಿಯಾಶೀಲ ಛಾಯಾಗ್ರಹಣಕ್ಕಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಹಾಗೂ ದಸರಾ ಛಾಯಾಚಿತ್ರ ಸ್ಪರ್ಧೆ, ಆಳ್ವಾಸ್ ನುಡಿಸಿರಿ ಅಂತರರಾಷ್ಟ್ರೀಯ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಹಾಗೂ ಬೆಂಗಳೂರಿನ ಕೆಪಿಎ ಅಂತರರಾಷ್ಟ್ರೀಯ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಬಹುಮಾನ, ದೆಹಲಿಯ ವೈಲ್ಡ್ ಲೈಫ್ ಫೋಟೋಗ್ರಫಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಇತರ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕರ್ನಾಟಕ ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲೆಗೆ ಹೆಸರು ತಂದಿದ್ದಾರೆ.
ಬಾಂಗ್ಲಾದೇಶದ ಅಗಿಲೆ ಫೋಟೋಗ್ರಫಿಕ್ ಸೊಸೈಟಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಹಾನರಬಲ್ ಮೆನ್ಸನ್ ಗೌರವ ಸೇರಿದಂತೆ ಅಮೇರಿಕಾದ ನ್ಯೂಯಾರ್ಕ್, ನಾರ್ತ್ ಮೆಸಿಡೋನಿಯಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಇವರ ಛಾಯಾ ಚಿತ್ರಗಳು ಪ್ರದರ್ಶನಗೊಂಡಿದೆ.
ವಿಶೇಷವೆಂದರೆ, ತಾವು ಕಲಿತ ಸಹ್ಯಾದ್ರಿ ಕಾಲೇಜಿನಲ್ಲಿಯೂ ಕೂಡಾ ನಾಗರಾಜ್‌ರವರು ಪುರಸ್ಕರಿಸಲ್ಪಟ್ಟಿದ್ದಾರೆ. ಪರಿಸರದ ಜಾಗೃತಿಗಾಗಿ ಶಾಲಾ- ಕಾಲೇಜು ಗಳಲ್ಲಿ ಇವರು ಚಿತ್ರಿಸಿದ ವನ್ಯಜೀವಿಗಳ ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ.
ಕುವೆಂಪು ರಂಗಮಂದಿರ, ಕರ್ನಾಟಕ ಸಂಘ ಸೇರಿದಂತೆ ಹಲವೆಡೆ ಇವರ ಅಪರೂಪದ ಗ್ರಾಮೀಣ ಬದುಕು ಪ್ರಕೃತಿ ಪರಿಸರ ವನ್ಯಜೀವಿ ಸೇರಿದಂತೆ ಅನೇಕ ಬಗ್ಗೆ ಚಿತ್ರಗಳು ಪ್ರದರ್ಶನಗೊಂಡಿದೆ. ಅಲ್ಲದೇ ಇವರು ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜುಗಳ ಛಾಯಾಚಿತ್ರ ಸ್ಪರ್ಧೆಗಳ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ. ಜೊತೆಗೆ ಶಿವಮೊಗ್ಗದ ಜಿಲ್ಲಾಡಳಿತವು ಏರ್ಪಡಿಸಿದ್ದ ಸಹ್ಯಾದ್ರಿ ಉತ್ಸವ ಕಾರ್ಯಕ್ರಮದ ಛಾಯಾಚಿತ್ರ ಸ್ಪರ್ಧೆಯ ತೀರ್ಪುಗಾರರಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ಛಾಯಾಗ್ರಹಣ ಕುರಿತಾದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ಶಿವಮೊಗ್ಗದ ಜನತೆ ಇವರ ಕ್ಯಾಮರಾದಲ್ಲಿ ಮೂಡಿಬಂದ ಅದ್ಬುತ ಛಾಯಾಚಿತ್ರಗಳನ್ನು ವೀಕ್ಷಿಸಲು ಮರೆಯಬಾರದು.


