<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಕೆಪಿಸಿಎಲ್ ಅಧಿಕಾರಿಗಳ ವಿರುದ್ಧ ಮಾಜಿ ಡಿಸಿಎಂ ಈಶ್ವರಪ್ಪ ಗರಂ ಆದದ್ದೇಕೆ…?

Banner Ad
ಕೆಪಿಸಿಎಲ್ ಅಧಿಕಾರಿಗಳ ವಿರುದ್ಧ ಮಾಜಿ ಡಿಸಿಎಂ ಈಶ್ವರಪ್ಪ ಗರಂ ಆದದ್ದೇಕೆ…?

ಶಿವಮೊಗ್ಗ :- ಸಾಗರ ತಾಲೂಕು ಶರಾವತಿ ಹಿನ್ನೀರಿನ ಪಂಪ್ಡ್ ಸ್ಟೋರೇಜ್ ಯೋಜನೆ ಮಾಹಿತಿ ನೀಡದ ಕೆಪಿಸಿಎಲ್ ಅಧಿಕಾರಿಗಳ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿ ಕಾಡಿದರು.

ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳು ಕೆಪಿಸಿಎಲ್ ಅಧಿಕಾರಿಗಳ ಜೊತೆ ಆಯೋಜಿಸಿದ್ದ ಜಂಟಿ ಸಭೆಯಲ್ಲಿ ಮಾತನಾಡಿ, ಫೆ. 7ರಂದು ಇಲ್ಲಿಯ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಪಂಪ್ಡ್ ಸ್ಟೋರೇಜ್ ಕುರಿತು 32 ಪ್ರಶ್ನಾವಳಿಗಳನ್ನು ಸಲ್ಲಿಸಿ ಉತ್ತರ ಬಯಸಿದ್ದೆವು. ಆದರೆ ಇಂದಿಗೂ ಕೆಪಿಸಿಎಲ್ ಅಧಿಕಾರಿಗಳು ಅದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇಂದಿನ ಸಭೆಯಲ್ಲಿ ಹಾಜರಿದ್ದ ಕೆಪಿಸಿಎಲ್ ಅಧಿಕಾರಿಗಳಿಗೆ ತಾವು ಯಾವ ಮಾಹಿತಿ ಹೊತ್ತು ತಂದಿದ್ದೀರಿ ಎಂದು ಈಶ್ವರಪ್ಪಪ್ರಶ್ನಿಸಿದಾಗ, ನಾವು ಎಂಡಿ ಜೊತೆ ಚರ್ಚಿಸಿ ಮುಂದಿನ ದಿನಾಂಕವನ್ನು ತಿಳಿಸಿ ಬಂದಿದ್ದೇವೆ ಎಂದಾಗ ಈಶ್ವರಪ್ಪ ಸಿಟ್ಟಿಗೆದ್ದು ಮಾಹಿತಿನೇ ಇಲ್ಲದೆ ನೀವು ಏಕೆ ಬಂದಿದ್ದೀರ ಎಂದು ಪ್ರಶ್ನಿಸಿದರು.

ಆ ಕೂಡಲೆ ಈಶ್ವರಪ್ಪ ಮೊಬೈಲ್‌ನಿಂದ ಕೆಪಿಸಿಎಲ್ ಎಂಡಿ ಅವರಿಗೆ ಫೋನ್ ಮೂಲಕ ಮಾಹಿತಿ ಕೋರಿದಾಗ ಆಕಡೆಯಿಂದ ಅಧಿಕಾರಿಗೆ ಈಶ್ವರಪ್ಪ ಅವರು ಮಾತನಾಡುತ್ತಿದ್ದಾರೆ ಎಂಬುದೆ ತಿಳಿಯದೇ ‘ಪಂಪ್ಡ್ ಸ್ಟೋರೇಜ್ ಬಗ್ಗೆ ಯಾವುದೇ ಮಾಹಿತಿ ನೀಡಬೇಡಿ ಎಂದು ಎಂಡಿ ಆದೇಶಿಸಿದ್ದಾರೆ ಎಂಬ ಉತ್ತರ ಬಂದಿದ್ದನ್ನು ಕೇಳಿ ಈಶ್ವರಪ್ಪ ಕೆಲಕಾಲ ಅವಾಕ್ಕಾದರು. ನಾನು ಈಶ್ವರಪ್ಪ ಮಾತನಾಡುತ್ತಿರುವುದು. ನೀವು ಯಾರು ? ಎಂದು ಕೇಳಿದಾಗ ಫೋನ್ ಸ್ವಿಚ್ ಆಫ್ ಮಾಡಿದ್ದು ಈಶ್ವರಪ್ಪ ಅವರನ್ನು ಮತ್ತಷ್ಟು ಕೆರಳಿಸಿತು. ಇದರಿಂದ ಇನ್ನೂ ಸಿಟ್ಟಾದ ಅವರು ಪಂಪ್ಡ್ ಸ್ಟೋರೇಜ್ ಬಗ್ಗೆ ಮಾಹಿತಿಯನ್ನು ನ್ಯಾಯಾಲಯದ ಮೂಲಕ ಪಡೆದುಕೊಳ್ಳುವುದಾಗಿ ಆಕ್ರೋಶಿತರಾದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಪರಿಸರ ಹೋರಾಟಗಾರ ಡಾ.ಬಿ.ಎಂ.ಕುಮಾರಸ್ವಾಮಿ, ಕೆ.ಈ. ಕಾಂತೇಶ್ ಹಾಗೂ ಅಧಿಕಾರಿಗಳು ಸೇರಿದಂತೆ ಹಲವರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *