ಶಿವಮೊಗ್ಗ :- ಪ್ರತಿಷ್ಠಿತ ರೋಟರಿ ಕ್ಲಬ್ ಶಿವಮೊಗ್ಗ ಹಾಗೂ ನಿಸರ್ಗಮನೆ ಶಿರಸಿ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವು ಇದೇ ಜುಲೈ 26ನೇ ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಮಧುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ನಡೆಯಲಿದೆ.
ನಿಸರ್ಗಮನೆ ಶಿರಸಿಯ ಡಾ. ವೆಂಕಟರಮಣ ಹೆಗಡೆ ಅವರು ಶಿಬಿರದಲ್ಲಿ ಉಪಸ್ಥಿತರಿದ್ದು ಉಚಿತ ಆರೋಗ್ಯ ಸಮಾಲೋಚನೆ ನೀಡಲಿದ್ದಾರೆ. ಆಹಾರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಪರಿಣತರಾಗಿರುವ ಡಾ. ಹೆಗಡೆ ಅವರು ವೇದ ವೆಲ್ನೆಸ್ ಸೆಂಟರ್ ಶಿರಸಿಯ ಮುಖ್ಯಸ್ಥರಾಗಿದ್ದಾರೆ.
ಶಿಬಿರದಲ್ಲಿ ಡಾ. ಹೆಗಡೆ ಅವರು ರಚಿಸಿರುವ ‘ಮನೆಯಲ್ಲೇ ಪರಿಹಾರ’, ‘ಆಹಾರ ಆರೋಗ್ಯ’, ‘ಪವರ್ ಡಯಟ್’, ‘ಅಡುಗೆಮನೆಯೇ ಆಸ್ಪತ್ರೆ ಆಹಾರವೇ ಔಷಧಿ ಎಂಬ ಪುಸ್ತಕಗಳು ಹಾಗೂ ಆಲ್ಫಾ ನ್ಯಾಚುರಲ್ ಆಹಾರ ಪೂರಕಗಳು ಲಭ್ಯವಿರಲಿವೆ. ಹೆಚ್ಚಿನ ಮಾಹಿತಿಗೆ 9632867180, 9353981093 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷ ಎನ್. ಗೋಪಿನಾಥ್ ಅವರು ತಿಳಿಸಿದ್ದಾರೆ.


