<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆಂದು ಹೇಳಿದ್ದ ಬೇಳೂರು ಅವರು ನಂತರ ಕೊಡಲ್ಲ ಅಂದಿದ್ದೇಕೆ..?

Banner Ad
ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆಂದು ಹೇಳಿದ್ದ ಬೇಳೂರು ಅವರು ನಂತರ ಕೊಡಲ್ಲ ಅಂದಿದ್ದೇಕೆ..?

ಶಿವಮೊಗ್ಗ :- ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಬೆಳಗ್ಗೆ ೧೦ ಗಂಟೆಗೆ ರಾಜೀನಾಮೆ ನೀಡುವುದಾಗಿ ನಿನ್ನೆ ಘೋಷಿಸಿದ್ದರು. ಆದರೆ ಇದೀಗ ಬೇಳೂರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡುವುದರ ಜತೆಗೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಸಿದ್ದರಾಮಯ್ಯ ಅವರು ಈಗ ಖುಷಿಯಿಂದ ಇದ್ದಾರಲ್ಲ. ಹಾಗೆ ನೂರು ವರ್ಷ ಖುಷಿಯಿಂದ ಇರಲಿ. ಅವರ ಅನುಯಾಯಿಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ ಅಲ್ವಾ, ಇನ್ನೂ ನೂರು ವರ್ಷ ಅವರು ಚೆನ್ನಾಗಿರಲಿ, ನನಗೆ ಬೇಜರಾಗಿದೆ, ನನಗೆ ಕಣ್ಣೀರು ಬರ್ತಿದೆ. ಗ್ಲಾಸ್ ತೆಗೆದು ತೋರಿಸಲಾ ಎಂದು ಪರೋಕ್ಷವಾಗಿ ಮಾಜಿ ಸಿಎಂ ಮೇಲೆ ಬೇಳೂರು ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.

ರಾಜೀನಾಮೆ ನೀಡುವವರನ್ನು ತಕ್ಷಣವೇ ಪರಿಗಣಿಸಿ ಎಂದಿದ್ದಕ್ಕೆ ನಾನೇನು ಭಯಪಟ್ಟಿಲ್ಲ. ನಾನು ಭಯಪಡುವ ಮನುಷ್ಯ ಅಲ್ಲ. ನಾನೇ ಸಿಎಂ, ಹಾಗಾಗಿ ನಿಮ್ಮ ಜತೆ ಇದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅವರಿಗಾಗಿ ನಾನು ರಾಜೀನಾಮೆ ನಿರ್ಣಯವನ್ನು ವಾಪಾಸ್ ಪಡೆದುಕೊಂಡಿದ್ದೇನೆ. ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಬೇಳೂರು ಗೋಪಾಲ ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಂದುವರೆದು, ಯಾರೂ ದುಡುಕಿನ ನಿರ್ಧಾರ ತೆಗೆದುಕೊಳ್ಳ ಬಾರದು. ಇಂದು ಸಭೆಯಿದೆ. ಅಲ್ಲಿ ಯಾರೂ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತೇನೆ ಎಂದರು.

ಅವರು

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *