<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಆ. 22-23ರಂದು ಶಿವಮೊಗ್ಗ ಓಪನ್ ಅಂತರ ರಾಷ್ಟ್ರೀಯ ಕರಾಟೆ ಪಂದ್ಯಾವಳಿ

Banner Ad
ಆ. 22-23ರಂದು ಶಿವಮೊಗ್ಗ ಓಪನ್ ಅಂತರ ರಾಷ್ಟ್ರೀಯ ಕರಾಟೆ ಪಂದ್ಯಾವಳಿ

ಶಿವಮೊಗ್ಗ :- ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಆ. 22 ಮತ್ತು 23ರಂದು ಶಿವಮೊಗ್ಗ ಓಪನ್  ಅಂತರ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಶಿವಮೊಗ್ಗ ವಿನೋದ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಪಂದ್ಯಾವಳಿಗಳು ಆ. 22 ರಂದು ಬೆಳಿಗ್ಗೆ 10 ಗಂಟೆಗೆ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ನಗರದ ಗಣ್ಯರು, ರಾಜಕಾರಣಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಎರಡು ದಿನದ ಪಂದ್ಯಗಳು ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ನಡೆಯಲಿವೆ ಎಂದರು.

ಈ ಅಂತರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಅಮೇರಿಕಾ, ಶ್ರೀಲಂಕಾ, ನೇಪಾಳ ಮತ್ತು ಗಬಾನ್ ದೇಶಗಳ ಕ್ರೀಡಾಪಟುಗಳು ಸೇರಿದಂತೆ ದೇಶದ 8ರಾಜ್ಯಗಳಿಂದ 1500 ಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ವಿಶೇಷವಾಗಿ ಶಿವಮೊಗ್ಗದಿಂದಲೂ ಕೂಡ 200 ಸ್ಥಳೀಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅಮೇರಿಕಾದ ಗ್ರಾಂಡ್ ಮಾಸ್ಟರ್ ಫೆರ್ರ್‍ಇ ಎಫ್.ಮಲೆ ಈ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಆಗಮಿಸುತ್ತಾರೆ ಎಂದರು.

ಪಂದ್ಯಾವಳಿಯಲ್ಲಿ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 5 ವರ್ಷದಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಿತಿಯ ವಿಭಾಗಗಳು ಇರಲಿವೆ. ಹೊರ ರಾಜ್ಯ ಮತ್ತು ಜಿಲ್ಲೆ ಕ್ರೀಡಾಪಟುಗಳಿಗೆ ವಸತಿ ಊಟದ ವ್ಯವಸ್ಥೆ ಮಾಡಲಾಗಿದೆ. ವಿಜೇತರಿಗೆ ಆಕರ್ಷಕ ಪದಕ, ಟ್ರೋಫಿ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಅತಿ ಹೆಚ್ಚು ಪದಕ ಪಡೆದ ತಂಡಕ್ಕೆ ವಿಶೇಷ ಆಕರ್ಷಣೆಯಾಗಿ ಓಲಾ ಬೈಕ್ ಅನ್ನು ಬಹುಮಾನವಾಗಿ ನೀಡಲಾಗುವುದು. ಸಾಧಕ ಕ್ರೀಡಾಪಟುಗಳಿಗೆ ಸನ್ಮಾನ ಕೂಡ ಇರುತ್ತದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಮಂಡೆನಕೊಪ್ಪ ದೇವರಾಜ್, ರಾಘವೇಂದ್ರ, ಅನೂಪ್ ಶೇಖರ್, ನರಸಿಂಹ ಸ್ವಾಮಿ, ಸತ್ಯನಾರಾಯಣ, ಪಂಚಪ್ಪ, ರಾಮಚಂದ್ರ ಮಲ್ಲಿಕಾರ್ಜುನ, ಸಚಿನ್ ಶೆಟ್ಟಿ, ಪ್ರೀತಿಶ್ರೀ, ಕಾವ್ಯ, ಪ್ರಿಯಾಂಕ, ಶ್ರೀನಿವಾದ ಸೇರಿದಂತೆ ಹಲವರು ಇದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *