ಶಿವಮೊಗ್ಗ :- ವಿಶ್ವ ಹಿರಿಯ ನಾಗರಿಕರ ದಿನವು ಕೇವಲ ಆಚರಣೆಯಲ್ಲ. ಇದು ಹಿರಿಯರ ಅನುಭವಗಳಿಂದ ಕಲಿಯಲು, ಅವರಿಗೆ ಗೌರವ ನೀಡಲು ಹಾಗೂ ಅವರು ಘನತೆ ಮತ್ತು ಭದ್ರತೆಯಿಂದ ಬದುಕುವ ವಾತಾವರಣ ನಿರ್ಮಿಸಲು ಪ್ರೇರೇಪಿಸುವ ದಿನವಾಗಿದೆ ಎಂದು ಖ್ಯಾತ ಅಡಿಕೆ ವರ್ತಕರು ಹಾಗೂ ಉದ್ಯಮಿಗಳೂ ಆದ ಹೆಚ್.ಎಸ್. ಸೂರ್ಯನಾರಾಯಣ ಹೊಸತೋಟ ಹೇಳಿದರು.
ರಾಜೇಂದ್ರನಗರದಲ್ಲಿರುವ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನಿಂದ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನ 2026 ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಟುಂಬಗಳು ಮತ್ತು ಸಮುದಾಯಗಳು ಹಿರಿಯ ರೊಂದಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಅಂತರ-ಪೀಳಿಗೆಯ ಬಾಂಧವ್ಯವನ್ನು ಬಲಪಡಿಸಬೇಕು ಎಂದು ಹೇಳಿದರು.
ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್ ಮಾತನಾಡಿ, ಹಿರಿಯ ನಾಗರಿಕರು ತಮ್ಮ ಅನುಭವ, ಜನ ಹಾಗೂ ಜೀವನ ಮಲ್ಯಗಳ ಮೂಲಕ ಕುಟುಂಬ ಮತ್ತು ಸಮಾಜದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು, ಅವರ ಕೊಡುಗೆ ಅಮೂಲ್ಯವಾಗಿದೆ ಎಂದರು.
ಹಿರಿಯರು ದಶಕಗಳ ಅನುಭವ, ಬುದ್ಧಿವಂತಿಕೆ, ನೆನಪುಗಳು ಹಾಗೂ ಜೀವನ ಪಾಠಗಳನ್ನು ಹೊತ್ತುಕೊಂಡು ಉತ್ತಮ ಬದುಕಿನ ಸಾಕ್ಷಿಯಾಗಿದ್ದಾರೆ. ಸಂಪ್ರದಾಯಗಳು, ಮಲ್ಯಗಳು ಮತ್ತು ಜನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದರ ಜೊತೆಗೆ ಕುಟುಂಬ ಮತ್ತು ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಶೇಷಗಿರಿ ಅವರು, ವಿಶ್ವ ಹಿರಿಯ ನಾಗರಿಕರ ದಿನವು ಹಿರಿಯರನ್ನು ಗೌರವಿಸುವ ಹಾಗೂ ಅವರ ಜೀವಮಾನದ ಸಾಧನೆಗಳನ್ನು ಸ್ಮರಿಸುವ ಮಹತ್ವದ ದಿನವಾಗಿದೆ ಎಂದರು. ಈ ಸಂದರ್ಭದಲ್ಲಿ ಈಸ್ಟ್‌ನ ಹಿರಿಯ ಸದಸ್ಯರಾದ ಎಚ್.ಬಿ. ಆದಿಮೂರ್ತಿ, ಗಣೇಶ್ ಎಸ್., ಶ್ರೀಕಾಂತ್ ಎನ್.ಎಚ್., ಡಾ. ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ್ ಪಿ. ರಾಯ್ಕರ್, ಚಂದ್ರಶೇಖರಯ್ಯ ಹಾಗೂ ಶ್ರೀನಿವಾಸ್ ಗೌಡ ಎಚ್.ಎನ್. ರನ್ನು ಗೌರವಿಸಿ ಸನ್ಮಾನಿಸಲಾಯಿತು.


