<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಜಂಟಿ ಸರ್ವೇ ಮಾಡಿಸಿ : ಬಿ.ವೈ. ರಾಘವೇಂದ್ರ ಮನವಿ

Banner Ad
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಜಂಟಿ ಸರ್ವೇ ಮಾಡಿಸಿ : ಬಿ.ವೈ. ರಾಘವೇಂದ್ರ ಮನವಿ

ಶಿವಮೊಗ್ಗ :- ಕಸ್ತೂರಿ ರಂಗನ್ ವರದಿ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಭೆ ಕರೆಯುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೂ ಮುಂಚೆ ಸಿಎಂ ಅಧಿಕಾರಿಗಳೊಂದಿಗೆ ರಾಜ್ಯದ 10 ಜಿಲ್ಲೆಗಳ ಅರಣ್ಯಜಂಟಿ ಸರ್ವೇ ಮಾಡಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಸ್ತೂರಿರಂಗನ್ ವರದಿ ೭ ನೇ ಕರಡು ಅಧಿಸೂಚನೆ ಬಿಡುಗಡೆಯಾಗಿದ್ದು, ಇದರಿಂದ ರಾಜ್ಯದ ಶಿವಮೊಗ್ಗ-146, ಚಿಕ್ಕಮಗಳೂರು-137, ಕೊಡಗು-53, ಹಾಸನ-30, ಮೈಸೂರು-48, ಚಾಮರಾಜನಗರ-20, ಉತ್ತರ ಕನ್ನಡ-566, ದಕ್ಷಿಣ ಕನ್ನಡ-೪೩, ಉಡುಪಿ ಜಿಲ್ಲೆ ಬೈಂದೂರು ಕ್ಷೇತ್ರ ಕುಂದಾಪು-34, ಬೆಳಗಾವಿ-42 ಜಿಲ್ಲೆಯಗಳ ಒಟ್ಟು 1439 ಗ್ರಾಮಗಳಲ್ಲಿನ ರೈತರು ಹಾಗೂ ಕೂಲಿ ಕಾರ್ಮಿಕರಗಳ ಮೇಲೆ ಪರಿಣಾಮ ಬೀರಿದ್ದು, ಈ ವರದಿಯಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ಕಸ್ತೂರಿ ರಂಗನ್ ವರದಿಯ 7ನೇ ಕರಡು ಪ್ರತಿ ಪಶ್ಚಿಮ ಘಟ್ಟ ಜನರುಗಳಲ್ಲಿ ಆತಂಕ ಮೂಡಿಸಿದೆ.ಅದರಲ್ಲಿ ಕರ್ನಾಟಕದ ರೈತರು ಭಯ ಭೀತರಾಗಿದ್ದಾರೆ.ಇಡೀ ದೇಶದಲ್ಲಿ 20,668 ಚದರ ಕಿಮೀ ಪ್ರದೇಶ ಅರಣ್ಯ ಕರ್ನಾಟಕದಲ್ಲಿದೆ.ನಂತರ ಸ್ಥಾನದಲ್ಲಿ ಮಹರಾಷ್ಟ್ರ 17,360 ಚದರ ಕಿಮೀ ಪ್ರದೇಶಹೊಂದಿದೆ.ಇನ್ನು ಕೇರಳ, ತಮಿಳುನಾಡು ಗೋವಾ, ರಾಜಸ್ತಾನ ನಂತರದ ಸ್ಥಾನದಲ್ಲಿದೆ.ಕಸ್ತೂರಿ ರಂಗನ್ ವರದಿ ಜರಿ ಮಾಡುವುದರಿಂದ ಕರ್ನಾಟಕ ಮಲೆನಾಡು ಭಾಗದ ಜನರಿಗೆ ಹೆಚ್ಚು ಹಾನಿಯಾಗಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯಉಪಮುಖ್ಯಮಂತ್ರಿ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾವು ರೈತ ಹಾಗೂ ಪ್ರಜಪ್ರಭುತ್ವದ ವಿರೋಧಿಯಾಗಿದ್ದರೆ 2 ಮತ್ತು 3ನೇ ಕರಡು ಪ್ರತಿಯ ವದರಿಯನ್ನು ಜರಿ ಮಾಡುತ್ತಿದ್ದೇವು.ಆದರೆ ಅಂತಹ ಯಾವುದೇ ಉದ್ದೇಶ ನಮ್ಮ ಪಕ್ಷಕ್ಕೆ ಇಲ್ಲ. ರೈತರ ಬದುಕು ನಮಗೆ ಮುಖ್ಯ.ರಾಜ್ಯ ಸರ್ಕಾರ ಅಭಿಪ್ರಾಯ ಕೇಳಬೇಕಿರುವುದು ಕೇಂದ್ರ ಸರ್ಕಾರ ಕರ್ತವ್ಯ ಆ ನಿಟ್ಟಿನಲ್ಲಿ ಕೇಳಿದ್ದಾರೆ ಎಂದರು.

ನಮ್ಮ ಪಕ್ಷದ ಪರವಾಗಿ ಸಿಎಂಗೆ ಮನವಿ ಮಾಡುತ್ತೇನೆ.ಕೂಡಲೇ ರಾಜ್ಯದ 10 ಜಿಲ್ಲೆಗಳಲ್ಲಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಸರಿಯಾದ ಸೂಚನೆ ನೀಡಿ. ಅರಣ್ಯ ಭಾಗದಲ್ಲಿ ಹೆಚ್ಚು ಅಧಿಕಾರಿಗಳನ್ನು ನೇಮಿಸಿ ಹಾಗೂ ಆಯಾ ಭಾಗದಲ್ಲಿ ಜಂಟಿ ಸಭೆ ಮಾಡಿ.ಶೂನ್ಯ ಬಫರ್ ಸೋನ್ ನಿರ್ಮಿಸಿ ವನ್ಯ ಜೀವಿಧಾಮ, ಅಭಯಾರಣ್ಯ ಹಾಗೂ ಕಿರು ಅರಣ್ಯಗಳಿಗಷ್ಟೇಸಿಮೀತ ಮಾಡಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಬಿಜೆಪಿ ಪ್ರಭಾರಿ ಸಿದ್ರಾಮಣ್ಣ, ಮಾಜಿ ಶಾಸಕರುಗಳಾದ ಆಶೋಕ್ ನಾಯ್ಕ, ಕೆ.ಜಿ.ಕುಮಾರಸ್ವಾಮಿ ಪ್ರಮುಖರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಮೋಹನ್ ರೆಡ್ಡಿ, ಮಾಲತೇಶ್, ಸಿಂಗನಹಳ್ಳಿ ಸುರೇಶ್, ಗಿರೀಶ್ ಭದ್ರಾಪುರ, ಹರೀಸ್, ಚಂದ್ರಶೇಖರ್.ಎಸ್, ಮಂಜುನಾಥ್.ಎನ್ ಇನ್ನಿತರರು ಇದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *