<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ ಸೈನ್ಸ್ ಮೈದಾನದಲ್ಲಿ ಮರಗಳ ಮಾರಣ ಹೋಮ : ಪರಿಸರ ವಾದಿಗಳ ವಿರೋಧ

Banner Ad
ಶಿವಮೊಗ ಸೈನ್ಸ್ ಮೈದಾನದಲ್ಲಿ ಮರಗಳ ಮಾರಣ ಹೋಮ : ಪರಿಸರ ವಾದಿಗಳ ವಿರೋಧ

ಶಿವಮೊಗ :- ಬಿ.ಹೆಚ್ ರಸ್ತೆಯ ಸೈನ್ಸ್ ಮೈದಾನದಲ್ಲಿ ಕೆಪಿಎಸ್ ಶಾಲೆ ನಿರ್ಮಾಣಕ್ಕಾಗಿ ಆವರಣದಲ್ಲಿ ಇದ್ದ 23 ಮರಗಳನ್ನು ಕಡಿತಲೆ ಮಾಡಿರುವುದನ್ನು ವಿರೋಧಿಸಿ ಇಂದು ಪರಿಸರವಾದಿಗಳು, ಶಿವಮೊಗ್ಗ ನಾಗರೀಕ ಹಿತಾ ರಕ್ಷಣಾ ಸಮಿತಿ ಮತ್ತು ರಾಷ್ಟ್ರಭಕ್ತ ಬಳಗದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಷ್ಟ್ರ ಭಕ್ತ ಬಳಗದ ಮುಖಂಡ ಕೆ.ಈ.ಕಾಂತೇಶ್ ಹಾಗೂ ನಾಗರೀಕ ಹಿತಾ ರಕ್ಷಣಾ ವೇದಿಕೆಗಳ ನೇತೃತ್ವದಲ್ಲಿ ಸ್ಥಳ ವಿಕ್ಷಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಲೇಜಿನ ಎಸ್‌ಡಿಎಂಸಿ, ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಯಿತು..

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಈ. ಕಾಂತೇಶ್, ಇಲ್ಲಿ ಸುಮಾರು 18 ವರ್ಷದ 24 ಮರಗಳನ್ನು ಕಡಿತಲೆ ಮಾಡಲಾಗಿದೆ. ಇದು ಸರಿಯಲ್ಲ.ಒಂದು ಮರ ಕಡಿದರೆ 10೦ ಸಸಿ ನೆಡಬೇಕು.ಹಾಗಾಗಿ ಕನಿಷ್ಠ 240 ಸಸಿಗಳನ್ನು ನೀವು ನೆಡಲೇ ಬೇಕು.ಗಿಡ ನೆಡುವವರೆಗೂ ಯಾವುದೆ ಕಾಮಗಾರಿಗಳನ್ನು ಇಲ್ಲಿ ಮುಂದುವರೆಸುವಂತಿಲ್ಲವೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ವಿ. ವಸಂತ್ ಕುಮಾರ್, ಶ್ರೀಪತಿ, ಶೇಖರ್ ಗೌಳೆರ್, ಆಶೋಕ್ ಕುಮಾರ್, ಜರ್ನಾಧನ್ ಪೈ, ಕೆ.ವಿ. ಸುಬ್ಬಣ್ಣ, ಶ್ರೀಕಾಂತ್, ನಾಗೇಶ್ ಸೇರಿದಂತೆ ಹಲವರು ಇದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *