ಶಿವಮೊಗ್ಗ:- ನಗರದ ರಾಜೇಂದ್ರನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಲಾದ ತಿಂಗಳ ಕುಟುಂಬ ಸಮ್ಮಿಲನ ಸಭೆಯಲ್ಲಿ “ಸವಿನೆನಪು ಮೆಲ್ಲುಸಿರೇ ಸವಿಗಾನ – ಹಳೆಯ ಕನ್ನಡ ಚಿತ್ರಗೀತೆಗಳು” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ ಆದ್ಯ ಸನ್ನಾನ ಸ್ವೀಕರಿಸಿ ಮಾತನಾಡಿ, ಸಂಗೀತದ ಪರಂಪರೆಯನ್ನು ಸಂರಕ್ಷಿಸುವ ಅಗತ್ಯವನ್ನು ಹೇಳಿದರು.
ಗಾಯಕರಾಗುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಹಾಗೂ ಬದ್ಧತೆ ಅಗತ್ಯ. ಗಾಯಕರಾಗ ಬಯಸುವವರು ಮತ್ತು ಈಗಾಗಲೇ ಗಾಯನ ಕ್ಷೇತ್ರದಲ್ಲಿರುವವರು ತಮ್ಮ ಕಂಠದ ಆರೈಕೆಗೆ ವಿಶೇಷ ಗಮನ ನೀಡಬೇಕು ಎಂದು ತಿಳಿಸಿದರು.
ಚಲನಚಿತ್ರ ಸಂಗೀತದ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ ಅವರು, ಕನ್ನಡ ನಾಡು ಮತ್ತು ಭಾಷೆಗೆ ಅವರು ನೀಡಿರುವ ಕೊಡುಗೆಯನ್ನು ಕನ್ನಡಿಗರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ. ವಿಜಯ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ವಸಂತ್ ಹೋಬಳಿದಾರ್, ಮಹೇಶ್ ಆಲೇಮನೆ, ಆರ್. ಮನೋಹರ, ಎಚ್.ಬಿ. ಗಣೇಶ್, ಎಸ್. ಶ್ರೀಕಾಂತ್, ಡಾ. ಪರಮೇಶ್ವರ್ ಶಿಗ್ಗಾವ್, ಕೃಷ್ಣಮೂರ್ತಿ, ಬಿ. ಸತೀಶ್ ಚಂದ್ರ, ಡಿ. ಕಿಶೋರ್ ಕುಮಾರ್, ಬಿ.ಆರ್. ಧನಂಜಯ್, ರಘುರಾಜ್ ಎಚ್.ಕೆ., ಡಾ. ರವಿಕಿರಣ್ ಎಚ್.ಕೆ., ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್, ಕಾಸಲ ವಿ. ಸುರೇಂದ್ರ, ಸಂತೋಷ್ ಕುಮಾರ್ ಬಿ.ಎನ್., ಸಂಜೀವ್ ಎಸ್.ಎನ್., ಅಜಿತ್ ಎಚ್.ಎಸ್., ಶ್ರೀನಿವಾಸ್ ಗೌಡ, ಡಾ. ಅರುಣ್ ಎಂ., ಗಂಗಪ್ಪ, ಜಗದೀಶ್, ಗುರುಮೂರ್ತಿ, ವಿಜಯ್ ಕುಮಾರ್, ವೀಣಾ ಕಿಶೋರ್ ಇನ್ನಿತರರಿದ್ದರು.


