ಶಿವಮೊಗ್ಗದ :- ಆಹಾರ ಉದ್ಯಮಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲಕ್ಕೆ ಸಂಬಂಧಿಸಿದ ಲೋಪ ದೋಷಗಳ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಉಪವಿಭಾಗ ಅಧಿಕಾರಿ ಡಾ. ಮೈತ್ರಿ ಅವರ ನೇತೃತ್ವದ ತಂಡ ಇಂದು ಕೆಲ ಹೋಟೆಲ್ ಸರ್ಕಾರಿ ಹಾಸ್ಟೆಲ್ ಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ವಿಶೇಷ ಆಹಾರ ಸುರಕ್ಷಿತ ತಪಾಸಣಾ ಅಭಿಯಾನದ ನಿಮಿತ್ತ ಇಂದು ಭೇಟಿ ನೀಡಿದ ಅಧಿಕಾರಿಗಳು ಮಾನವ ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥಗಳನ್ನು ತಯಾರಿಸಿ, ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಕೆಲ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಆಹಾರ ಸುರಕ್ಷಿತ ನಿಯಮಗಳ ಬಗ್ಗೆ ಕಟ್ಟುನಿಟ್ಟಾಗಿ ಪಾಲಿಸಲು ಹೋಟೆಲ್ ಮತ್ತು ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಲಾಯಿತು. ಅವಧಿ ಮೀರಿದ ಮತ್ತು ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ತಕ್ಷಣ ಪ್ರತ್ಯೇಕಿಸಿ ಅವುಗಳ ತಯಾರಿಕೆ ಅಥವಾ ಮಾರಾಟದಲ್ಲಿ ಬಳಕೆ ಆಗದಂತೆ ಸೂಕ್ತ ರೀತಿಯ ವಿಲೇವಾರಿ ಮಾಡಬೇಕು ಎಂದು ಸೂಚಿಸಿದ ವಿಭಗಾಧಿಕಾರಿಗಳು ಸೂಕ್ತ ತಾಪಮಾನದಲ್ಲಿ ಸ್ವಚ್ಛ ಹಾಗೂ ಆಹಾರ ಸುರಕ್ಷಿತ ಕಂಟೇನರ್ ಗಳಲ್ಲಿ ಸಂಗ್ರಹಿಸಬೇಕು ಮತ್ತು ಅಡುಗೆಮನೆ ಆಹಾರ ತಯಾರಿಕ ಸ್ಥಳ ಸಂಗ್ರಹಣ ಪ್ರದೇಶ ಗಳನ್ನು ಸ್ವಚ್ಛ ಮತ್ತು ಶುಷ್ಕ ವಾತಾವರಣದಲ್ಲಿ ನಿರ್ವಹಿಸಬೇಕೆಂದು ತಿಳಿಸಿದರು.
ಹಾಲು ಮಾಂಸ ಮೊಟ್ಟೆ ಮತ್ತು ಸಿದ್ಧಹಾರಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು ರೆಫ್ರಿಜರೇಟರ್ ಕೂಲರ್ ಹಾಗೂ ಇತರೆ ತಾಪಮಾನ ನಿಯಂತ್ರಣ ಸಾಧನೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಆಹಾರ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದು ತಿಳಿಸಿದರು. ಆಹಾರ ನಿರ್ವಹಿಸುವ ಸಿಬ್ಬಂದಿ ಅವರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು ಜೊತೆಗೆ ಸುರಕ್ಷಿತ ಆಹಾರ ನಿರ್ವಹಣಾ ವಿಧಾನಗಳ ಕುರಿತು ಅಗತ್ಯ ತರಬೇತಿಯನ್ನು ನೀಡಬೇಕೆಂದು ಮಾನ್ಯ ಅಧಿಕಾರಿಗಳು ತಿಳಿಸಿದರು. ತಪಾಸಣಾ ಸಮಯದಲ್ಲಿ ಕಂಡು ಬಂದ ಲೋಪ ದೋಷಗಳನ್ನು ಇನ್ನು ಹತ್ತು ದಿನದೊಳಗೆ ಸರಿಪಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಆಹಾರ ಸುರಕ್ಷಿತ ಮಾನದಂಡಗಳ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ದಂಡಾಧಿಕಾರಿ ವಿ.ಎಸ್. ರಾಜೀವ್, ತಾಲೂಕು ಆರೋಗ್ಯ ಅಧಿಕಾರಿ ಚಂದ್ರಶೇಖರ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಿಬ್ಬಂದಿ ಸೇರಿದಂತೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು. ಬೇಟಿ ಸಮಯದಲ್ಲಿ ಹೋಟೆಲ್ ಹರ್ಷ ಫನ್೯, ನಿರಾಶ್ರಿತರ ಪರಿಹಾರ ಕೇಂದ್ರ ತಾವರೆಕೊಪ್ಪ ವಿನೋಬನಗರದ ಸವಿ ಬೇಕರಿ ಹಾಗೂ ಗಾಂಧಿನಗರದ ವಿಧಾತ್ರಿ ಭವನ ಇಲ್ಲಿಗೆ ಭೇಟಿ ನೀಡಲಾಯಿತು.


