<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ವಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲೆ ಎಫ್‌ಐಆರ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Banner Ad
ವಿಪಕ್ಷ ನಾಯಕ ರಾಹುಲ್ ಗಾಂಧಿ ಮೇಲೆ ಎಫ್‌ಐಆರ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ,ಸೆ.೧: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ಮಾಡಿದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ’ಶುದ್ಧೀಕರಣ ಹವನ’ ಮಾಡಿದ್ದನ್ನು ರಾಹುಲ್ ಗಾಂಧಿ ಅವರು ಖಂಡಿಸಿ, ಇದು ದಲಿತ ವಿರೋಧಿ ಮನಸ್ಥಿತಿ, ಅಸ್ಪಶ್ಯತೆ ಎಂದು ಹೇಳಿದ್ದರು.ಇದಕ್ಕೆ ಆಕ್ಷೇಪಿಸಿ ಅವರ ವಿರುದ್ಧವೇ ಹಲ್ದ್ವಾನಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಬಿಜೆಪಿ ಸರ್ಕಾರ ರಾಜ್ಯ ಯಂತ್ರವನ್ನು ದುರುಪಯೋಗಪಡಿಸಿಕೊಂಡು ದಲಿತ ದೌರ್ಜನ್ಯದ ವಿರುದ್ಧ ಮಾತನಾಡುವವರನ್ನು ಗುರಿಯಾಗಿಸುತ್ತಿದೆ. ಹಲ್ದ್ವಾನಿ ಶುದ್ಧೀಕರಣವು ಜತಿ ತಾರತಮ್ಯದ ಸಂಕೇತ. ಅದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧ ಸುಳ್ಳು ಎಫ್‌ಐಆರ್ ಹಾಕಲಾಗಿದೆ.ಇದು ಸಂವಿಧಾನ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಚೇತನ್ ಕೆ.ಗೌಡ, ಎನ್.ರಮೇಶ್, ಎಸ್.ಟಿ.ಚಂದ್ರಶೇಖರ್, ಆರ್.ರಾಜಶೇಖರ್, ಪಿ.ಎಸ್. ಗಿರೀಶ್ ರಾವ್, ವೈ.ಹೆಚ್. ನಾಗರಾಜ್, ಶ್ವೇತಾ ಬಂಢಿ, ಪುಷ್ಪ ಶಿವಕುಮಾರ್, ಎಸ್.ಟಿ.ಹಾಲಪ್ಪ,ಶಿವಣ್ಣ, ಜಿ.ಡಿ.ಮಂಜುನಾಥ್, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ಎಸ್.ಕೆ.ಮರಿಯಪ್ಪ, ಕಲೀಂ ಪಾಷ, ಯು. ಶಿವಾನಂದ್, ಎಸ್.ಪಿ.ಶೇಷಾದ್ರಿ, ಹೆಚ್.ಪಾಲಕ್ಷಿ, ಕೆ.ರಂಗನಾಥ್, ದೇವಿಕುಮಾರ್, ಹೆಚ್.ಪಿ ಗಿರೀಶ್, ಧೀರರಾಜ್ ಹೊನ್ನವಿಲೆ, ವೇದ ವಿಜಯ್‌ಕುಮಾರ್, ಸ್ಟೇಲ ಮಾರ್ಟಿನ್, ಅರ್ಚನಾ ನಿರಂಜನ್, ರೇಷ್ಮಾ, ಕವಿತಾ, ಎಂ.ಎಸ್.ಸಿದ್ದಪ್ಪ, ನಯಾಜ್ ಅಹಮ್ಮದ್, ಮಧು, ಎಸ್.ರವಿಕುಮಾರ್,ಚಿನ್ನಪ್ಪ, ವೈ.ಬಿ. ಚಂದ್ರಕಾಂತ್ ಇನ್ನಿತರರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *