<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಹರೀಶಿ-ಚನ್ನಪಟ್ಟಣ ಮಾರ್ಗದ ರಸ್ತೆ ತುಂಬೆಲ್ಲಾ ಬರೀ ಗುಂಡಿಗಳು : ದುರಸ್ಥಿಗೆ ಗ್ರಾಮಸ್ಥರ ಪ್ರತಿಭಟನೆ
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.0050003617, 0.3330001);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

Banner Ad
ಹರೀಶಿ-ಚನ್ನಪಟ್ಟಣ ಮಾರ್ಗದ ರಸ್ತೆ ತುಂಬೆಲ್ಲಾ ಬರೀ ಗುಂಡಿಗಳು : ದುರಸ್ಥಿಗೆ ಗ್ರಾಮಸ್ಥರ ಪ್ರತಿಭಟನೆ

ಸೊರಬ :- ತಾಲ್ಲೂಕಿನ ಚಂದ್ರಗುತ್ತಿ-ಹರೀಶಿ-ಚನ್ನಪಟ್ಟಣ ಗ್ರಾಮೀಣ ಭಾಗದ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿದ್ದು, ದೈನಂದಿನ ಸಂಚಾರಕ್ಕೆ, ಶಾಲಾ ಮಕ್ಕಳಿಗೆ ಮತ್ತು ತುರ್ತು ವೈದ್ಯಕೀಯ ಸೇವೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ಕೇವಲ ಓಡಾಟದ ಸಮಸ್ಯೆಯಲ್ಲದೆ, ಜೀವಭಯಕ್ಕೆ ಕಾರಣವಾಗಿದೆ ಎಂದು ಸಮಾಜ ಸೇವಕ ರಾಘವೇಂದ್ರ ಸುಂಟ್ರಹಳ್ಳಿ ಆರೋಪಿಸಿದರು.

ತಾಲ್ಲೂಕಿನ ಹಿರೇಕಲಗೋಡು ಗ್ರಾಮದ ಮಾರಮ್ಮನಕಟ್ಟೆ ಬಳಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹದೆಗೆಟ್ಟ ರಸ್ತೆ ಅಭಿವೃದ್ಧಿ ಪಡಿಸುವಂತೆ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಚಂದ್ರಗುತ್ತಿ ಹೋಬಳಿ‌ ಹರೀಶಿ-ಚನ್ನಪಟ್ಟಣ ಮಾರ್ಗದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಬನವಾಸಿ ಹಾಗೂ ಶಿರಸಿಗೆ ತಲಪುವ ರಸ್ತೆಗಳಲ್ಲಿ ಗುಂಡಿಗಳೇ ಕಾಣುತ್ತವೆ. ಜತೆಗೆ ಅನುಮತಿಯಿಲ್ಲದೇ ಮರಳು ಸಾಗಾಣಿಕೆ ಹಾಗೂ ಭಾರದ ವಾಹನಗಳ ಸಂಚಾರದಿಂದ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ರಸ್ತೆ ತುಂಬೆಲ್ಲಾ ಗುಂಡಿಗಳೇ ತುಂಬಿದ್ದು‌ ಸಂಚಾರಕ್ಕೆ ಕಂಟಕ ಎದುರಾಗಿದೆ ಎಂದು ಆರೋಪಿಸಿದರು‌.

ವಿದ್ಯಾನಗರ, ಹರೀಶಿ, ಸಂಭಾಪುರ ಬೆನ್ನೂರು, ತಲಗುಂದ್ಲಿ ಹಾಗೂ ಗಡಿಭಾಗವಾದ ಕೊಪ್ಪ ಗ್ರಾಮದವರೆಗೂ ಸಂಚಾರ ಸುಗಮವಾಗಿಲ್ಲ. ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ. ಅನೇಕ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಹರೀಶಿಗೆ ಬರುತ್ತಾರೆ. ಅವರಿಗೆ ನಿಗದಿತ ವೇಳೆಗೆ ಶಾಲೆ ತಲುಪಲು ಆಗುತ್ತಿಲ್ಲ. ತುರ್ತು ವೈದ್ಯಕೀಯ ಸೇವೆಗೆ ತೊಡಕುಂಟಾಗಿದೆ. ತಾಲ್ಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ದಿಗೆ ಆಧ್ಯತೆ ನೀಡಿದ್ದು, ಈ ಭಾಗದ ರಸ್ತೆಗಳ‌ ಅಭಿವೃದ್ದಿ ಕಾಮಗಾರಿಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಕೂಡಲೇ ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಬೇಕು.‌ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ದನಂಜಯ ನಾಯ್ಕ, ರಾಜು ಕೆಂಚಿಕೊಪ್ಪ, ರಾಜು ಮಾವಿನಬಳ್ಳಿಕೊಪ್ಪ, ಕೃಷ್ಣಪ್ಪ ಹಿರೇನೆಲ್ಲೂರು, ಧರ್ಮಪ್ಪ, ವಿನಾಯಕ, ರಾಜು ಗೌಡ, ಚಂದ್ರಪ್ಪ, ವಜ್ರಕುಮಾರ್, ಗಿರೀಶ್,‌ ಪ್ರಸನ್ನಗೌಡ, ಚಂದ್ರಶೇಖರ್, ಶಿವಾನಂದ ಗೌಡ, ಸುಮಂತ್ ಸಿ. ನಾಯ್ಕ ಇದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *