<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಸೆ. 5ರಂದು ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಲೋಕಾರ್ಪಣೆ

Banner Ad
ಸೆ. 5ರಂದು ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಲೋಕಾರ್ಪಣೆ

ಶಿವಮೊಗ್ಗ :- ಪ್ರಸಿದ್ಧ ಮಕ್ಕಳ ವೈದ್ಯರು, ಹಿರಿಯ ಅಂಕಣಕಾರರು ಹಾಗೂ ಉಪನ್ಯಾಸಕ ಡಾ. ಸಿ.ಜಿ. ರಾಘವೇಂದ್ರ ವೈಲಾಯ ಅವರ ‘ಖಾರಾ-ಬಾತ್’ ಅಂಕಣ ಬರಹಗಳ ಸಂಕಲನ ಕೃತಿ ಸೆ. 5ರಂದು ಸಂಜೆ 5ಕೆ ಲೋಕಾರ್ಪಣೆಯಾಗಲಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ, ಶಿವಮೊಗ್ಗ ಜಿಲ್ಲಾ ಶಾಖೆ ಹಾಗೂ ಯಾಜಿ ಪ್ರಕಾಶನದ ಸಹಯೋಗದಲ್ಲಿ ಸೆ. 5ರಂದು ಸಂಜೆ 5ಕ್ಕೆ ತಿಲಕ್‌ನಗರದ ಸನ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ ೪.೩೦ಕ್ಕೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ಸನ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಹಾಗೂ ಕೀಲು-ಮೂಳೆ ತಜ್ಞ ಡಾ. ಆಕಾಶ್ ಹೊಸತೋಟ ಕಾರ್ಯಕ್ರಮ ಉದ್ಘಾಟಿಸುವರು. ಖ್ಯಾತ ಅಂಕಣಕಾರ ಹಾಗೂ ಆರ್ಥಿಕ ತಜ್ಞ ರಂಗಸ್ವಾಮಿ ಮೂಕನಹಳ್ಳಿ ಪುಸ್ತಕ ಲೋಕಾರ್ಪಣೆ ಮಾಡುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಯು. ವೈದ್ಯನಾಥ್ ಪುಸ್ತಕ ಪರಿಚಯ ಮಾಡಿಕೊಡುವರು.

‘ಕಗ್ಗ’ ಖ್ಯಾತಿಯ ವಿದ್ವಾನ್ ಜಿ.ಎಸ್. ನಟೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷ ಡಾ. ಎನ್. ಸುಧೀಂದ್ರ ಅಧ್ಯಕ್ಷತೆ ವಹಿಸುವರು. ಕೃತಿಯ ಲೇಖಕ ಡಾ. ಸಿ.ಜಿ. ರಾಘವೇಂದ್ರ ವೈಲಾಯ ಗೌರವಾನ್ವಿತ ಉಪಸ್ಥಿತರಿರುವರು.

ಸುಪ್ರಿಯಾ ಕಾರ್ಯಕ್ರಮ ನಿರೂಪಿಸುವರು. ಶ್ರೀ ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಲೇಖಕರು ಬರೆದ ಆಯ್ದ ಕವನಗಳ ಗಾಯನ ಪ್ರಸ್ತುತಿ ನಡೆಯಲಿದೆ. ಜಿ.ಎಸ್. ನಟೇಶ್ ಅವರ ವಾಗ್ಝರಿ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಲಿದೆ. ಸ್ಥಳದಲ್ಲೇ ಪುಸ್ತಕ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜನನಿ ನ್ಯೂ ಲೈಫ್ ಆಸ್ಪತ್ರೆ ಹಾಗೂ ಸಿಬ್ಬಂದಿ ವರ್ಗ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಶಾಖೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *