ಶಿವಮೊಗ್ಗ :- ನಾಡ ಹಬ್ಬ ದಸರಾ ಉತ್ಸವಕ್ಕೆ ದಿನೇ ದಿನೇ ಮೆರುಗು ಹೆಚ್ಚುತ್ತಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಪ್ರತೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ಇದಕ್ಕಾಗಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಸಾಕಷ್ಟು ಸಿದ್ದತೆ ಮಾಡಿಕೊಂಡಿವೆ. ಜೊತೆಗೆ ಮುಖ್ಯವಾಗಿ ಅಂಬಾರಿ ಹೋರುವ ಆನೆಗಳಿಗೆ ವಿಶೇಷ ತಾಲೀಮು ನೀಡಲಾಗುತ್ತಿದೆ.
ಇತಿಹಾಸ ಪ್ರಸಿದ್ಧ ಕೋಟೆ ಚಂಡಿಕಾ ದುರ್ಗೆಯ ಸನ್ನಿಧಿಯಿಂದ ನಗರದ ಫ್ರೀಡಂ ಪಾಕ್೯ ವರೆಗೆ ಅಂಬಾರಿಯೊಂದಿಗೆ ನಗರದಲ್ಲಿನ ದೇವಾಲಯಗಳ ದೇವರುಗಳು ಅಂದು ವಾಹನಗಳಲ್ಲಿ ಮೆರವಣಿಗೆ ಮುಲಕ ಬರುವುದು ಸಾಮಾನ್ಯ.
ಆನೆಗಳಿಗೆ ಪಟಾಕಿ ಸಿಡಿಸಿ ತಾಲೀಮು…
ಬನ್ನಿ ಹಬ್ಬ ನಡೆಯು ಫ್ರೀಡಂ ಪಾಕ್೯ವರೆಗೆ ಅಂಬಾರಿ ಹೋರುವ ಸೋಮಣ್ಣ, ಬಾಲಣ್ಣ ಹಾಗೂ ಸಾಗರ್ ಆನೆಗಳಿಗೆ ತಾಲೀಮು ನೀಡಲಾಗುತ್ತಿದೆ. ಇಂದು ಫ್ರೀಡಂ ಪಾಕ್೯ಗೆ ಕರೆತಂದು ಪಟಾಕಿ ಸಿಡಿಸಿ ಆನೆಗಳು ಗಾಬರಿಯಾಗದಂತೆ ತಾಲೀಮು ನಡೆಸಲಾಯಿತು.
ಇದನ್ನು ನೋಡಲು ಮಕ್ಕಳೊಂದಿಗೆ ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸುತ್ತಿರುವುದು ಕಂಡುಬಂತು. ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.


