<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗದಲ್ಲಿ ಜನಾಕರ್ಷಿಸಿದ ರೈತ ದಸರಾ…

Banner Ad
ಶಿವಮೊಗ್ಗದಲ್ಲಿ ಜನಾಕರ್ಷಿಸಿದ ರೈತ ದಸರಾ…

ಶಿವಮೊಗ್ಗ :- ನಾಡಹಬ್ಬ ಶಿವಮೊಗ್ಗ ದಸರಾ ಸಂಭ್ರಮಕ್ಕೆ ಗುರುವಾರ ರೈತ ಸಂಸ್ಕತಿಯ ಸೊಬಗು, ಕೃಷಿ ಪರಂಪರೆಯ ವೈಭವ ಹಾಗೂ ಗ್ರಾಮೀಣ ಬದುಕಿನ ಮೆರಗು ಮೇಳೈಸಿತು. ಮಹಾನಗರ ಪಾಲಿಕೆ ದಸರಾ ಸಮಿತಿ ವತಿಯಿಂದ ಆಯೋಜಿಸಿದ್ದ ರೈತ ದಸರಾ ಅಂಗವಾಗಿ ನಡೆದ ರೈತರ ಜಥಾವು ನಗರದಲ್ಲಿ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಿತು.

ನಗರದ ಸೈನ್ಸ್ ಮೈದಾನದಿಂದ ಬೆಳಗ್ಗೆ ಆರಂಭವಾದ ರೈತ ದಸರಾ ಜಥಾಕ್ಕೆ ಜಿಲ್ಲೆಯ ಪ್ರಗತಿಪರ ರೈತ ಮಹಿಳೆ ಆಶಾರಾಣಿ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಶಾಸಕ ಎಸ್.ಎನ್. ಚನ್ನಬಸಪ್ಪ, ರೈತ ಮುಖಂಡರಾದ ಕೆ.ಟಿ. ಗಂಗಾಧರ್, ಎಚ್.ಆರ್. ಬಸವರಾಜಪ್ಪ ಹಾಗೂ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ ಸಾಥ್ ನೀಡಿದರು.

ಬಳಿಕ ಸೈನ್ಸ್ ಮೈದಾನದಿಂದ ಹೊರಟ ರೈತ ಜಥಾವು ಬಿ.ಎಚ್. ರಸ್ತೆ, ಶಿವಪ್ಪ ನಾಯಕ ವೃತ್ತ, ಎಎ ಸರ್ಕಲ್, ನೆಹರು ರಸ್ತೆ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ ಹಾಗೂ ಮಹಾವೀರ ಸರ್ಕಲ್ ಮೂಲಕ ಸಾಗಿ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಕುವೆಂಪು ರಂಗಮಂದಿರ ತಲುಪಿತು. ಮೆರವಣಿಗೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ರೈತರ ಈ ಸಂಭ್ರಮವನ್ನು ಕುತೂಹಲದಿಂದ ವೀಕ್ಷಿಸಿ ಕಣ್ತುಂಬಿಕೊಂಡರು.

ಜಥಾದಲ್ಲಿ ರೈತ ಸಂಘಟನೆಯ ಮುಖಂಡರಾದ ರಾಘವೇಂದ್ರ, ಡಿ.ಡಿ. ಶಿವಕುಮಾರ್, ವೈ.ಎಚ್. ನಾಗರಾಜ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದ್, ರೈತ ದಸರಾ ಕಾರ್ಯಕ್ರಮದ ಕಾರ್ಯದರ್ಶಿ ಆರ್. ವಿಕಾಸ್, ನಿವೃತ್ತ ಕಂದಾಯ ಅಧಿಕಾರಿ ನಾಗೇಂದ್ರ, ಪಾಲಿಕೆ ಪ್ರಮುಖರು ಹಾಜರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *