ಏಕಂ ಕ್ಷೇತ್ರದಲ್ಲಿ ಅಕ್ಟೋಬರ್ 21 ರಿಂದ ಶ್ರೀ ಕಲ್ಕಿ ಭಗವಾನ್ ಅವರ ಮಹಾಸಮಾಧಿಯು ಎಲ್ಲಾ ಭಕ್ತರಿಗೆ ದರ್ಶನ ಮತ್ತು ಪ್ರಾರ್ಥನೆಗಾಗಿ ತೆರೆಯಲಿದೆ.ಈ ಪವಿತ್ರ ಸಮಾಧಿ ಸ್ಥಳವು ಶ್ರೀ ಕಲ್ಕಿ ಭಗವಾನ್ ಅವರ ದೈವಿಕ ಚೈತನ್ಯ, ಅಪಾರ ಅನುಗ್ರಹ ಮತ್ತು ಆಶೀರ್ವಾದದಿಂದ ತುಂಬಿರುವ ಪುಣ್ಯಭೂಮಿಯಾಗಿದೆ. ಇಲ್ಲಿ ಭಕ್ತರು ಬಂದು ಧ್ಯಾನ ಮಾಡಿ ದೈವಿಕ ಅನುಗ್ರಹ ಮತ್ತು ಆಶೀರ್ವಾದ ಪಡೆಯಬಹುದು. ಭಕ್ತರು ಶ್ರೀ ಕಲ್ಕಿ ಭಗವಾನ್ ಅವರಿಂದ ಪಡೆದಿರುವ ಅಪಾರ ಆಶೀರ್ವಾದಗಳಿಗಾಗಿ ಕೃತಜ್ಞತೆ ಯನ್ನು ಅರ್ಪಿಸಬಹುದು.

ಶ್ರೀ ಕಲ್ಕಿ ಭಗವಾನ್ ಅವರು ಸೆಪ್ಟೆಂಬರ್ 29 ರಂದು ಮಹಾ ಸಮಾಧಿಯನ್ನು ಪಡೆದರು. ಕಳೆದ ನಾಲ್ಕು ದಶಕಗಳಿಂದ ಅವರು ಲಕ್ಷಾಂತರ ಕುಟುಂಬಗಳ ಜೀವನ ದಲ್ಲಿ ಅನೇಕ ಪವಾಡಗಳನ್ನು ನಡೆಸಿ, ಲೆಕ್ಕವಿಲ್ಲದಷ್ಟು ಜನರನ್ನು ಮುಕ್ತಿಯ ಮಾರ್ಗದಲ್ಲಿ ಮುನ್ನಡೆಸಿದ್ದಾರೆ. ಅವರು ತಮ್ಮ ಎಲ್ಲಾ ಭಕ್ತರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಸಮಸ್ತ ಮಾನವ ಕುಲವನ್ನು ಎಲ್ಲಾ ವಿಧದ ದುಃಖಗಳಿಂದ ವಿಮುಕ್ತಗೊಳಿಸಿ, ಮುಕ್ತಿ ಮತ್ತು ಚೈತನ್ಯದ ಉನ್ನತ ಸ್ಥಿತಿಗಳಿಗೆ ಜಾಗೃತಗೊಳಿಸುವುದು ಅವರ ಮಹಾನ್ ಧ್ಯೇಯವಾಗಿತ್ತು.
ಶ್ರೀ ಭಗವಾನ್ ಅವರ ಏಕೈಕ ಪುತ್ರರಾದ ಮತ್ತು ಒನ್‌ನೆಸ್ ಮೂವ್‌ಮೆಂಟ್‌ನ ಸಹ- ಸಂಸ್ಥಾಪಕ ರಾದ ಮುಕ್ತಿ ಗುರು ಶ್ರೀ ಕೃಷ್ಣಾಜಿ ಯವರು ಮತ್ತು ಅವರ ಪತ್ನಿ ಶ್ರೀ ಮಾತಾ ಪ್ರೀತಾಜಿಯವರು ಅಕ್ಟೋಬರ್ 2, 2026 ರಂದು ಮಹಾಸಮಾಧಿ ಪ್ರತಿಷ್ಠಾಪನೆಯ ಪವಿತ್ರ ಪೂಜಾ ವಿಧಿಗಳನ್ನು ನೆರವೇರಿಸಿದರು. ಈ ಪವಿತ್ರ ಕಾರ್ಯವು ಹಲವಾರು ಸೇವಕರ ಸಹಕಾರದಿಂದ ನೆರವೇರಿತು.
ಆಂಧ್ರಪ್ರದೇಶ ರಾಜ್ಯ ಸರ್ಕಾರವು ರಾಜ್ಯದ ಮರ್ಯಾದೆಯೊಂದಿಗೆ ಈ ಮಹಾಸಮಾಧಿ ಕಾರ್ಯದಲ್ಲಿ ಭಾಗವಹಿಸಿತು. ಹಲವಾರು ಗಣ್ಯ ವ್ಯಕ್ತಿಗಳು ಸಹ ಆಗಮಿಸಿ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು.
ಪ್ರಪಂಚದಾದ್ಯಂತದ ಕೋಟ್ಯಂತರ ಭಕ್ತರು ಶ್ರೀ ಕಲ್ಕಿ ಭಗವಾನ್ ಅವರ ಅಂತಿಮ ದರ್ಶನ ಪಡೆಯಲು ಅನುಕೂಲವಾಗುವಂತೆ ಆನ್‌ಲೈನ್ ಮೂಲಕ ನೇರ ಪ್ರಸಾರವನ್ನು ಏರ್ಪಡಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ಈ ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದ ಲಕ್ಷಾಂತರ ಭಕ್ತರಿಗೆ ಏಕಂ ಕ್ಷೇತ್ರದಲ್ಲಿ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಷ್ಟೇ ಅಲ್ಲದೆ ಅಕ್ಟೋಬರ್ 9ರಂದು ಲಕ್ಷಾಂತರ ಭಕ್ತರು ತಮ್ಮ ಮನೆಗಳಲ್ಲಿ ರುಚಿಯಾದ ಅಡುಗೆಯನ್ನು ಪ್ರೀತಿಯಿಂದ ತಯಾರಿಸಿ, ತಮ್ಮ ಕುಟುಂಬಸ್ಥರಿಗೆ, ನೆರೆಹೊರೆಯವರಿಗೆ, ಇತರ ಜನರಿಗೆ, ಅನಾಥಾಶ್ರಮಗಳಲ್ಲಿ, ವೃದ್ಧಾಶ್ರಮ ಗಳಲ್ಲಿ, ಶಾಲೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಅನ್ನದಾನ ಮಾಡುವ ಮೂಲಕ ಶ್ರೀ ಕಲ್ಕಿ ಭಗವಾನ್ ಅವರಿಗೆ ತಮ್ಮ ಅಪಾರ ಪ್ರೀತಿ, ಕೃತಜ್ಞತೆ ಮತ್ತು ಭಕ್ತಿಯನ್ನು ವ್ಯಕ್ತಪಡಿಸಿದರು. ಈ ಮಹಾ ಪುರುಷರ ಸಮಾಧಿ ದರ್ಶನದಿಂದ ಭಕ್ತರು ಪುನೀತರಾಗಲಿದ್ದಾರೆ. ಶ್ರೀ ಕಲ್ಕಿ ಭಗವಾನ್ ಮಹಾಸಮಾಧಿ ದರ್ಶನ ಏಕಂ ಕ್ಷೇತ್ರದಲ್ಲಿ ಇದೇ ಅಕ್ಟೋಬರ್ 21ರಿಂದ ಶ್ರೀ ಕಲ್ಕಿ ಭಗವಾನ್ ಅವರ ಮಹಾಸಮಾಧಿಯು ಎಲ್ಲಾ ಭಕ್ತರಿಗೆ ದರ್ಶನ ಮತ್ತು ಪ್ರಾರ್ಥನೆಗಾಗಿ ತೆರೆಯಲಿದೆ.
ಈ ಸೇವಾ ಕಾರ್ಯದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಭಾಗವಹಿಸಿದರು. ಈ ಪವಿತ್ರ ಕಾರ್ಯದ ಮೂಲಕ ಭಕ್ತರೆಲ್ಲರೂ ಒಂದಾಗಿ ಶ್ರೀ ಕಲ್ಕಿ ಭಗವಾನ್ ಅವರ ಆಶೀರ್ವಾದ ಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದರು. ಈ ಪವಿತ್ರ ಕಾರ್ಯದ ಕುರಿತು ವಿವರಗಳಿಗೆ ಸೇವಾಕರ್ತೆ ಸುಶ್ಮಿತಾ ಚವ್ವಾಣ್, 9591830240 ರಲ್ಲಿ ಸಂಪರ್ಕಿಸಲು ಕೋರಲಾಗಿದೆ.


