ಶಿವಮೊಗ್ಗ : ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಗಳಿಂದ ಪುನಃ ಜೀವ ಬೆದರಿಕೆ ಕರೆ ಬಂದಿದೆ. ಬೆದರಿಕೆ ಹಾಕಿದವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ರಾಷ್ಟ್ರಭಕ್ತರ ಬಳಗದ ಮುಖಂಡರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಅವರಿಗೆ ಈಶ್ವರಪ್ಪ ದೂರು ಸಲ್ಲಿಸಿದ್ದಾರೆ.
ಈಶ್ವರಪ್ಪ ದೂರಿನಲ್ಲಿ ಏನಿದೆ?
ಅಕ್ಟೋಬರ್ 17ರ ರಾತ್ರಿ 8.49ಕ್ಕೆ ರಿಜ್ವಾನ್ ಬೇಗ್ ಎಂಬ ವ್ಯಕ್ತಿಯಿಂದ ಕರೆ ಬಂದಿದೆ. ಅದೇ ರಾತ್ರಿ 10.49ಕ್ಕೆ ಡಿಜಿಟಲ್ ಫರಾನ್ ರಶೀದ್ ಎಂಬ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಟ್ರಾಯ್ ತಂತ್ರಾಂಶದ ಮೂಲಕ ಬೆದರಿಕೆ ಕರೆ ಮಾಡಿದವರ ಹೆಸರುಗಳು ತಿಳಿದುಬಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅನಾಮಧೇಯ ವ್ಯಕ್ತಿಗಳು ವೈಯಕ್ತಿಕವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿರುವುದರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ತೀವ್ರ ಆತಂಕ ಉಂಟಾಗಿದೆ. ಆದ್ದರಿಂದ ಇವರನ್ನು ತಕ್ಷಣವೇ ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಮಗೆ ಮತ್ತು ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ದೂರು ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕೆರೆ ಮಾಡಿದ ಇಬ್ಬರು ಬೆದರಿಕೆ ಹಾಕುವ ರೀತಿಯಲ್ಲೇ ಮಾತನಾಡಿದರು ಎಂದು ಆರೋಪಿಸಿದರು.
ಮೊದಲ ಕರೆ: ಮೊದಲ ವ್ಯಕ್ತಿ ರಿಜ್ವಾನ್ ಬೇಗ್ ಕರೆ ಮಾಡಿದಾಗ ನಾನು ಕುಟುಂಬದ ಜೊತೆಗೆ ಚಿತ್ರಮಂದಿರದಲ್ಲಿ ಇದ್ದೆ. ಆತ ನೀವು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಲ್ಲವೆ ಎಂದು ಪ್ರಶ್ನಿಸಿದ. ಆನಂತರ ಏನೇನೋ ಮಾತನಾಡಲು ಆರಂಭಿಸಿದ್ದ. ನನಗೆ ಆತನ ಮಾತು ಸ್ಪಷ್ಟವಾಗಿ ಕೇಳಿಸಲಿಲ್ಲ. ಆಗ ನಾನು ಸರಿಯಾಗಿ ಮಾತನಾಡುವುದಿದ್ದರೆ ಮಾತನಾಡು, ಇಲ್ಲದಿದ್ದರೆ ಪೊಲೀ ಸರಿಗೆ ದೂರು ನೀಡಬೇಕಾಗುತ್ತದೆ ಎಂದಾಗ ದೂರು ಕೊಡಿ ಎಂದು ಹೇಳಿ ಕರೆ ಕಟ್ ಮಾಡಿದ ಎಂದು ಈಶ್ವರಪ್ಪ ಆರೋಪಿಸಿದರು.
ಎರಡನೇ ಕರೆ: ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡು ವಾಗ ನಾನು ಸಚಿವ ಜಮೀರ್ ಅಹಮದ್ ಖಾನ್ ಅವರ ಬಗ್ಗೆ ಮಾತನಾಡಿದ್ದೆ. ಜಮೀರ್ ಅಹಮದ್ ಅವರು ಬಡವರಿಗೆ ೧೨ ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈತನಕ ಹಣವು ಬಿಡುಗಡೆಯಾ ಗಿಲ್ಲ, ಅವರು ಈ ಕಡೆ ಬಂದಿಲ್ಲ ಎಂದು ಟೀಕಿಸಿದ್ದೆ. ಎರಡನೇ ಬಾರಿ ಕರೆ ಮಾಡಿದ ವ್ಯಕ್ತಿ ಈ ವಿಷಯ ಪ್ರಸ್ತಾಪಿಸಿ ದಾಖಲೆಗಳಿವೆ ಕೊಡು ತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ? ಎಂದು ಆರೋಪಿಸಿದರು.


