<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಅ. 26ರಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ರವರಿಗೆ ವಿಶೇಷ ಸನ್ಮಾನ

Banner Ad
ಅ. 26ರಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ರವರಿಗೆ ವಿಶೇಷ ಸನ್ಮಾನ

ಶಿವಮೊಗ್ಗ :- ಜಿಲ್ಲಾ ಮೈನಾರಿಟಿ ಫೋರಂನಿಂದ ಶಿವಮೊಗ್ಗಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರವರಿಗೆ ಅಭಿನಂದನಾ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಸ್ ಬಾನುರವರ ಅಧ್ಯಕ್ಷತೆಯಲ್ಲಿ ಫೆ. 26 ರಂದು ಬೆಳಿಗ್ಗೆ 10ಕ್ಕೆ ಶಿವಮೊಗ್ಗದ ಫಾರೂಖಿಯಾ ಶಾದಿಮಹಲ್ ನಲ್ಲಿ ನಡೆಯಲಿದೆ.

ಘನ ಉಪಸ್ಥಿತಿಯಲ್ಲಿ ಸಜ್ಜಾದೇ ನಶೀನ್ ನೀಲಂಗ ಷರೀಫ್ ಮಹಾರಾಷ್ಟ್ರದ ಹಜರತ್ ಸೈಯದ್ ಷಾ ಹೈದರ್ ವಲೀ ಉಪಸ್ಥಿತರಿರುವರು. ಅತಥಿಗಳಾಗಿ ಸಮಾಜ ಸೇವಕರಾದ ಮುಖ್ತಿಯಾರ್ ಅಹಮದ್, ಉದ್ಯಮಿ ಇಕ್ಬಾಲ್ ಹಬೀಬ್ ಸೇಠ್, ಹಾಮೀದ್ ಉಮ್ರಿ ಉಪಸ್ಥಿತರಿರುವರು.

ಸಮಾರಂಭಕ್ಕಿಂತ ಮುನ್ನ ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದಿಂದ ಫಾರೂಖಿಯಾ ಶಾದಿ ಮಹಲ್ ವರೆಗೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಸಂಚಾಲಕ ಮುಖ್ತಿಯಾರ್ ಅಹಮದ್ ಮತ್ತು ಮೊಹಮ್ಮದ್ ಮುಹೀಬ್ ಉಲ್ಲಾ ತಿಳಿಸಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *