ಶಿವಮೊಗ್ಗ :- ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ಇಂದು ಶಿವಮೊಗ್ಗದ ಬಿಹೆಚ್ ರಸ್ತೆ ಶಿವಪ್ಪನಾಯಕ ವೃತ್ತದಲ್ಲಿನ ಹೂವಿನ ಮಾರುಕಟ್ಟೆ ಮಾಳಿಗೆಗಳ ಮುಂಭಾಗದ ಫುಟ್ಪಾತ್ ನಲ್ಲಿಯೇ ಹೂವಿನ ಮಾರಾಟದಲ್ಲಿ ತೊಡಗಿದ್ದವರನ್ನು ಇಂದು ಲಾಸ್ಟ್ ವಾರ್ನಿಂಗ್ ನೀಡಿ ತೆರವುಗೊಳಿಸಲಾಯಿತು.

ಈ ಹಿಂದೆ ಟ್ರಾಫಿಕ್ ಇಲಾಖೆಯಿಂದ ಹಲವು ಭಾರಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಠಿಯಿಂದ ಫುಟ್‌ಪಾತ್ ನಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಸದಂತೆ ಸೂಚಿಸಲಾಗಿತ್ತು. ಇದನ್ನು ಗಾಳಿಗೆ ತೂರಿ ಮತ್ತೆ ಮತ್ತೆ ಪುಟ್‌ಪಾತ್ ನಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದರು.
ಇತ್ತೀಚೆಗಷ್ಟೆ ಕೆಲ ಟ್ರಾಫಿಕ್ ಪೊಲೀಸರು ಮುಂಗಟ್ಟುಗಳನ್ನು ತೆಗೆಸುವುದಾಗಿ ಸೂಚನೆ ನೀಡಿ ಹೋಗಿದ್ದರು. ಇದಕ್ಕೂ ತಗ್ಗದ ಹೂವಿನ ವ್ಯಾಪಾರಿಗಳಿಗೆ ಇಂದು ಇನ್ಸ್‌ಪೆಕ್ಟರ್ ದೇವರಾಜ್ ಅವರು ಮೈಕ್ ಮೂಲಕ ಅನೌನ್ಸ್ ಮಾಡುತ್ತಲೇ ಸಂಪೂರ್ಣವಾಗಿ ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.


