<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಕಾಂಗ್ರೆಸ್ ಆಡಳಿತದಲ್ಲಿ ಬಹುಸಂಖ್ಯಾತ ಹಿಂದೂಗಳು ಬದುಕುವುದೇ ದುಸ್ತರವಾಗಿದೆ

Banner Ad
ಕಾಂಗ್ರೆಸ್ ಆಡಳಿತದಲ್ಲಿ ಬಹುಸಂಖ್ಯಾತ ಹಿಂದೂಗಳು ಬದುಕುವುದೇ ದುಸ್ತರವಾಗಿದೆ

ಶಿವಮೊಗ್ಗ :- ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಬಹುಸಂಖ್ಯಾತ ಹಿಂದೂಗಳು ಬದುಕುವುದೇ ದುಸ್ತರವಾಗಿದೆ. ಮುಸ್ಲಿಂ ಓಲೈಕೆ ಮತ್ತು ತುಷ್ಠೀಕರಣ ದಿಂದಾಗಿ ಹಿಂದೂಗಳು ತಮ್ಮ ಹಬ್ಬಗಳ ಆಚರಣೆಗಳನ್ನು ಮಾಡುವುದೇ ಕಷ್ಟವಾಗಿದ್ದು, ಅದಕ್ಕೆ ಮದ್ದೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ ಎಂದು ರಾಷ್ಟ್ರಭಕ್ತರ ಬಳಗದ ಯುವ ನಾಯಕರಾದ ಕೆ.ಈ. ಕಾಂತೇಶ್ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ಮೇಲಿನ ಮುಸ್ಲಿಂರ ಗುಂಪೊಂದರ ದಾಳಿ ಖಂಡಿಸಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಸೆ.೧೦ರ ನಾಳೆ ಬೆಳಿಗ್ಗೆ ೧೦-೩೦ಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಹಿಂದೂಗಳು ಗಣೇಶ ಉತ್ಸವ, ಹನುಮ ಜಯಂತಿ ಹಾಗೂ ಇತರ ಧಾರ್ಮಿಕ ಆಚರಣೆಗಳು ಹಾಗೂ ಉತ್ಸವಗಳನ್ನು ನಡೆಸುವುದು ನಿಮ್ಮ ಆಡಳಿತದಲ್ಲಿ ಅಪರಾಧವೇ ? ಹಿಂದೂಗಳ ಮೆರವಣಿಗೆಗಳು ಮಸೀದಿಗಳ ಮುಂದೆ ಸಾಗಬಾರ ದೆಂದಾದರೆ, ಮಸೀದಿಗಳು ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟ ಪ್ರದೇಶದಲ್ಲಿದೆಯೇ ? ಮದ್ದೂರಿನ ಮಸೀದಿಯ ಒಳಗಡೆ ಕಲ್ಲುಗಳನ್ನು ಶೇಖರಿಸಿಟ್ಟಿ ರುವಂತೆ ಇನ್ನೂ ಯಾವ ಯಾವ ಮಾರಕಾಸ್ತ್ರಗಳನ್ನು, ಬಾಂಬ್‌ಗಳನ್ನು ಇಟ್ಟಿರಬಹುದೆಂದು ತಪಾಸಣೆ ಮಾಡುವಿರಾ? ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ಮೆರವಣಿಗೆಯ ಮೇಲೆ ಕಲ್ಲು ಎಸೆದು, ಗಲಭೆ ಸೃಷ್ಠಿಸಿ, ವಿದ್ಯುತ್ ಕಡಿತಗೊಳಿಸಲು ಕುಮ್ಮಕ್ಕು ನೀಡಿದವರು ಯಾರು ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.

ನ್ಯಾಯ ಕೇಳಿ, ಪ್ರತಿಭಟನೆ ನಡೆಸಿದ ಹಿಂದೂಗಳ ಮೇಲೆ ಪೊಲೀಸರು ಮನಸೋ ಇಚ್ಛೆ ಮಹಿಳೆಯರನ್ನೂ ಬಿಡದೆ ಲಾಠಿ ಪ್ರಹಾರ ಮಾಡಲು ನಿರ್ದೇಶನ ನೀಡಿದವರು ಯಾರು ? ಪದೇ ಪದೇ ರಾಜ್ಯದಲ್ಲಿ ಈ ರೀತಿ ಗಲಭೆ-ದೊಂಬಿ ಸೃಷ್ಟಿಸುತ್ತಿರುವ ಮುಸ್ಲಿಂ ಗೂಂಡಾಗಳನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬಹುಸಂಖ್ಯಾತ ಹಿಂದೂಗಳ ಆಚರಣೆಗಳಿಗೆ ಮುಂದಿನ ದಿನಗಳಲ್ಲಿ ಮುಸ್ಲಿಂ ಮತಾಂಧರಿಂದ ಯಾವುದೇ ತೊಂದರೆಗಳು ಆಗದಂತೆ ಕಠಿಣಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಮೋಹನ್ ರಾವ್ ಜಾದವ್, ವೆಂಕಟೇಶ್, ಮುರುಗೇಶ್, ಚಿದಾನಂದ, ಕುಬೇರಪ್ಪ, ರುದ್ರೇಶ್, ಶಿವಾಜಿ, ಅ.ಮ. ಪ್ರಕಾಶ್, ರಾಜು, ರುದ್ರಯ್ಯ, ನಾಗರಾಜ್, ಸಾಕ್ರಾನಾಯ್ಕ ಮತ್ತಿತರರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *