Tuesday, 3 November 2026 — Shimoga Today

Shimoga Today

News website

BREAKING NEWS
ಫ್ಲಾಶ್‌ ನ್ಯೂಸ್ ಶಿವಮೊಗ್ಗ ಜಿಲ್ಲೆಯಲ್ಲಿ 43 ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ ಗ್ರಾಮಾಂತರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ದ್ವಿಚಕ್ರ ವಾಹನ, ವೀಲ್‌ಚೇರ್, ಶ್ರವಣ ಸಾಧನಗಳ ವಿತರಣೆ ಕ್ರೀಡೆ ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ: ಕರ್ನಾಟಕ ತಂಡಕ್ಕೆ ಶಿವಮೊಗ್ಗದ ಆಯುಷ್ ವೈ.ಎಸ್. ಆಯ್ಕೆ Uncategorized ಎಸ್‌ಐಆರ್ ಈ ದೇಶದ ಅಸ್ಮಿತೆ : ಶಾಸಕ ಚನ್ನಬಸಪ್ಪ ನಮ್ಮೂರ್ ಸುದ್ದಿ ಶಿವಮೊಗ್ಗದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಉದ್ಘಾಟನೆ ಬೆಂಗಳೂರು ನಂದಿನಿ ಹಾಲು-ಮೊಸರು ದರ ಹೆಚ್ಚುವರಿ ಏರಿಕೆ : ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಶಿವಮೊಗ್ಗ ಕಾಗೋಡು ತಿಮ್ಮಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಸಿಎಂ ಎಲಿಕಾಫ್ಟರ್ ಕಳಿಸುವೆ ಎಂದಿದ್ಯಾಕೆ..? ಶಿವಮೊಗ್ಗ ಹಿಂದಿನ ಹೋರಾಟಗಳ ಫಲ ಇಂದಿನ ಸೌಲಭ್ಯಗಳು : ಡಿ.ಎಸ್. ಅರುಣ್ ಫ್ಲಾಶ್‌ ನ್ಯೂಸ್ ಶಿವಮೊಗ್ಗ ಜಿಲ್ಲೆಯಲ್ಲಿ 43 ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ ಗ್ರಾಮಾಂತರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ದ್ವಿಚಕ್ರ ವಾಹನ, ವೀಲ್‌ಚೇರ್, ಶ್ರವಣ ಸಾಧನಗಳ ವಿತರಣೆ ಕ್ರೀಡೆ ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ: ಕರ್ನಾಟಕ ತಂಡಕ್ಕೆ ಶಿವಮೊಗ್ಗದ ಆಯುಷ್ ವೈ.ಎಸ್. ಆಯ್ಕೆ Uncategorized ಎಸ್‌ಐಆರ್ ಈ ದೇಶದ ಅಸ್ಮಿತೆ : ಶಾಸಕ ಚನ್ನಬಸಪ್ಪ ನಮ್ಮೂರ್ ಸುದ್ದಿ ಶಿವಮೊಗ್ಗದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಉದ್ಘಾಟನೆ ಬೆಂಗಳೂರು ನಂದಿನಿ ಹಾಲು-ಮೊಸರು ದರ ಹೆಚ್ಚುವರಿ ಏರಿಕೆ : ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಶಿವಮೊಗ್ಗ ಕಾಗೋಡು ತಿಮ್ಮಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಸಿಎಂ ಎಲಿಕಾಫ್ಟರ್ ಕಳಿಸುವೆ ಎಂದಿದ್ಯಾಕೆ..? ಶಿವಮೊಗ್ಗ ಹಿಂದಿನ ಹೋರಾಟಗಳ ಫಲ ಇಂದಿನ ಸೌಲಭ್ಯಗಳು : ಡಿ.ಎಸ್. ಅರುಣ್
Uncategorized

ಎಸ್‌ಐಆರ್ ಈ ದೇಶದ ಅಸ್ಮಿತೆ : ಶಾಸಕ ಚನ್ನಬಸಪ್ಪ

Abhi
ವರದಿ: Abhi ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 10 ವೀಕ್ಷಣೆಗಳು

ಶಿವಮೊಗ್ಗ: ಎಸ್‌ಐಆರ್ ಈ ದೇಶದ ಅಸ್ಮಿತೆಯಾಗಿದ್ದು, ಇದನ್ನು ವಿರೋಧಿಸುವರುದೇಶದ ದ್ರೋಹಿಗಳು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ದೇಶ ಒಟ್ಟಾಗಿರುವುದು ಬೇಡ.ಅದು ಮೊದಲಿನಿಂದಲೂದೇಶದವನ್ನುಇಬ್ಬಾಗ ಮಾಡುವ ಕೆಲಸವನ್ನೇ ಮಾಡುತ್ತಿದೆ.ಈಗ ಎಸ್‌ಐಆರ್ ಕುರಿತಂತೆ ಜನರಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.ಈಗಾಗಲೇ ಇಡೀದೇಶದಲ್ಲಿ ಸೋತು ಸುಣ್ಣವಾಗಿರುವಕಾಂಗ್ರೆಸ್ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಪ್ರೇರಣೆಯಾಗಿರುವ ಚುನಾವಣಾ ಪ್ರಕ್ರಿಯೆಯನ್ನೇ ಬುಡ ಮೇಲು ಮಾಡುತ್ತಿದೆ. ಚುನಾವಣಾ ಆಯೋಗಕ್ಕೆ ಗೌರವ ಕೊಡುವ ಬದಲು ಅಪಚಾರ ಮಾಡುತ್ತಿದೆ. ಇದು ನಂಬಿಕೆ ದ್ರೋಹದ ಕೆಲಸವೆಂದು ಟೀಕಿಸಿದರು.
ಕಾಂಗ್ರೆಸ್ ಈ ದುಷ್ಟ ಬುದ್ದಿಯನ್ನು ಬಿಜೆಪಿ ಕಟುವಾಗಿ ಟೀಕಿಸುತ್ತದೆ. ಅಲ್ಲದೆ ಇದರ ವಿರುದ್ದ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆಯನ್ನು ಅಳಿಸಿ ಎಂಬ ಧ್ಯೇಯ ವಾಕ್ಯದೊಡನೆ ಪ್ರತಿಭಟನಾ ಸ್ವರೂಪದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಸೇರಿದಂತೆ ಹತ್ತು ಕಡೆಗಳಲ್ಲಿ ಈ ಜಾಗೃತಿ ಪ್ರತಿಭಟನೆ ನಡೆಯಲಿದೆ ಎಂದರು.

ಶಿವಮೊಗ್ಗದಲ್ಲಿಯೂ ಕೂಡ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಎಂಬ ಹೆಸರಿನಲ್ಲಿ ನವೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆರಾಮಣ್ಣ ಶೇಷ್ಟಿ ಪಾರ್ಕ್ನಿಂದಅಲ್ಲಮ ಪ್ರಭು ಮೈದಾನದವರೆಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ನೇತೃತ್ವನ್ನುಕೇಂದ್ರ ಸಚಿವೆ ಶೋಭಾಕರಂದ್ಲಾಜೆ ವಹಿಸಲಿದ್ದಾರೆ. ಬಿಜೆಪಿಯ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ವಿವಿಧ ಮೋರ್ಚಾ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.ಇದಕ್ಕಾಗಿ ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಎಸ್‌ಐಆರ್ ಪ್ರಕ್ರಿಯೆ ಅತ್ಯುತ್ತಮ ರೀತಿಯಲ್ಲಿ ಮೂಡಿ ಬಂದಿದೆ. ಸತ್ತು ಹೋದವರು, ಊರು ಬಿಟ್ಟು ಹೋದವರನ್ನು ಪಟ್ಟಿಯಿಂದ ತೆಗೆಯಬಾರದೇ? ಎರಡುಕಡೆ ಮತ ಪಟ್ಟಿಯಲ್ಲಿದ್ದವರನ್ನು ಕೈ ಬಿಡಬಾರದೇ? ಎಂದು ಪ್ರಶ್ನೆ ಮಾಡಿದ ಅವರು, ಕಾಂಗ್ರೆಸ್‌ತನ್ನ ಸೋಲನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಅಪಪ್ರಚಾರದಲ್ಲಿ ತೊಡಗಿರುವುದು ಒಂದು ದುಷ್ಟ ಹುನ್ನಾರವೇ ಸರಿ.ಅಣಕು ಸಂಸತ್ ಪ್ರದರ್ಶನ ಮಾಡುವಕಾಂಗ್ರೆಸ್‌ಗೆ ಸ್ವಲ್ಪವಾದರೂ ನೈತಿಕತೆಇದೆಯೇಎಂದು ಪ್ರಶ್ನೆ ಮಾಡಿದ ಅವರು ಕಾಂಗ್ರೆಸ್‌ನ ಈ ದುಷ್ಟ ನಡೆಯನ್ನು ನಾವು ಮೆಟ್ಟಿ ನಿಲ್ಲುತ್ತೇವೆ. ಜನರಿಗೆ ಸತ್ಯ ಸಂಗತಿಯನ್ನು ತಿಳಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ರೆಡ್ಡಿ, ದಿನ್‌ದಯಾಳ್, ನವುಲೆ ಮಂಜುನಾಥ್, ಶ್ರೀನಾಗ್, ಸೋಮೇಶ್ ಪಿ. ಶೇಟ್, ಪ್ರಭಾಕರ್, ಮಹಾಲ, ಲತಾ, ಯಶೋಧ, ಸುಧಾಮಣಿ, ಪ್ರಕಾಶ್, ಪರಮೇಶ್ ನಾಯ್ಕ್, ಲತಾ ಶ್ರೀನಿವಾಸ್, ಸೆಲ್ವಂ, ರಂಗೇಶ್ ಸೇರಿದಂತೆ ಹಲವರು ಇದ್ದರು.

👑

JOIN OUR COMMUNITY

✈️
Get Latest Updates, News, Offers & More
Spread the love
ಮುಖ್ಯ ಸಂಪಾದಕರು (Chief Editor) ✍️ 326 ಲೇಖನಗಳು

Abhi

Abhi ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment