Tuesday, 3 November 2026 — Shimoga Today

Shimoga Today

News website

BREAKING NEWS
ಫ್ಲಾಶ್‌ ನ್ಯೂಸ್ ಶಿವಮೊಗ್ಗ ಜಿಲ್ಲೆಯಲ್ಲಿ 43 ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ ಗ್ರಾಮಾಂತರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ದ್ವಿಚಕ್ರ ವಾಹನ, ವೀಲ್‌ಚೇರ್, ಶ್ರವಣ ಸಾಧನಗಳ ವಿತರಣೆ ಕ್ರೀಡೆ ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ: ಕರ್ನಾಟಕ ತಂಡಕ್ಕೆ ಶಿವಮೊಗ್ಗದ ಆಯುಷ್ ವೈ.ಎಸ್. ಆಯ್ಕೆ Uncategorized ಎಸ್‌ಐಆರ್ ಈ ದೇಶದ ಅಸ್ಮಿತೆ : ಶಾಸಕ ಚನ್ನಬಸಪ್ಪ ನಮ್ಮೂರ್ ಸುದ್ದಿ ಶಿವಮೊಗ್ಗದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಉದ್ಘಾಟನೆ ಬೆಂಗಳೂರು ನಂದಿನಿ ಹಾಲು-ಮೊಸರು ದರ ಹೆಚ್ಚುವರಿ ಏರಿಕೆ : ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಶಿವಮೊಗ್ಗ ಕಾಗೋಡು ತಿಮ್ಮಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಸಿಎಂ ಎಲಿಕಾಫ್ಟರ್ ಕಳಿಸುವೆ ಎಂದಿದ್ಯಾಕೆ..? ಶಿವಮೊಗ್ಗ ಹಿಂದಿನ ಹೋರಾಟಗಳ ಫಲ ಇಂದಿನ ಸೌಲಭ್ಯಗಳು : ಡಿ.ಎಸ್. ಅರುಣ್ ಫ್ಲಾಶ್‌ ನ್ಯೂಸ್ ಶಿವಮೊಗ್ಗ ಜಿಲ್ಲೆಯಲ್ಲಿ 43 ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ ಗ್ರಾಮಾಂತರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ದ್ವಿಚಕ್ರ ವಾಹನ, ವೀಲ್‌ಚೇರ್, ಶ್ರವಣ ಸಾಧನಗಳ ವಿತರಣೆ ಕ್ರೀಡೆ ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ: ಕರ್ನಾಟಕ ತಂಡಕ್ಕೆ ಶಿವಮೊಗ್ಗದ ಆಯುಷ್ ವೈ.ಎಸ್. ಆಯ್ಕೆ Uncategorized ಎಸ್‌ಐಆರ್ ಈ ದೇಶದ ಅಸ್ಮಿತೆ : ಶಾಸಕ ಚನ್ನಬಸಪ್ಪ ನಮ್ಮೂರ್ ಸುದ್ದಿ ಶಿವಮೊಗ್ಗದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಉದ್ಘಾಟನೆ ಬೆಂಗಳೂರು ನಂದಿನಿ ಹಾಲು-ಮೊಸರು ದರ ಹೆಚ್ಚುವರಿ ಏರಿಕೆ : ಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಶಿವಮೊಗ್ಗ ಕಾಗೋಡು ತಿಮ್ಮಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಸಿಎಂ ಎಲಿಕಾಫ್ಟರ್ ಕಳಿಸುವೆ ಎಂದಿದ್ಯಾಕೆ..? ಶಿವಮೊಗ್ಗ ಹಿಂದಿನ ಹೋರಾಟಗಳ ಫಲ ಇಂದಿನ ಸೌಲಭ್ಯಗಳು : ಡಿ.ಎಸ್. ಅರುಣ್
ನಮ್ಮೂರ್ ಸುದ್ದಿ

ಶಿವಮೊಗ್ಗದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಉದ್ಘಾಟನೆ

Abhi
ವರದಿ: Abhi ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 5 ವೀಕ್ಷಣೆಗಳು
ಶಿವಮೊಗ್ಗ :- ವಿಜ್ಞಾನ ಬೋಧನೆ ಕೇವಲ ಪಠ್ಯಪುಸ್ತಕದ ಪಾಠಗಳನ್ನು ಯಾಂತ್ರಿಕವಾಗಿ ಕಲಿಸುವ ಪ್ರಕ್ರಿಯೆಯಾಗಬಾರದು. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ, ಕುತೂಹಲ ಮತ್ತು ಅನ್ವೇಷಣಾ ಪ್ರವೃತ್ತಿಯನ್ನು ಜಾಗೃತಗೊಳಿಸುವ ವಿಜ್ಞಾನ ಪಠ್ಯಕ್ರಮಗಳು ಇಂದಿನ ಅಗತ್ಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎನ್.ಕೆ. ಚಿದಾನಂದ ಅಭಿಪ್ರಾಯಪಟ್ಟರು.
ನಗರದ ಜೆಪಿಎನ್ ಪ್ರೌಢಶಾಲೆಯಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕವು ಕೇವಲ ಸಂಭಾಷಣೆ ಮತ್ತು ಅಭಿನಯಕ್ಕೆ ಸೀಮಿತವಾಗದೆ, ಏಕೆ, ಏನು, ಎಲ್ಲಿ ಮತ್ತು ಯಾವಾಗ ಎಂಬ ಪ್ರಶ್ನೆಗಳಿಗೆ ಅರ್ಥಪೂರ್ಣ ಉತ್ತರ ನೀಡಿದಾಗ ಪರಿಪೂರ್ಣ ಅಭಿವ್ಯಕ್ತಿಯಾಗುತ್ತದೆ. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಸಾಮಾಜಿಕ ನಿರೀಕ್ಷೆಗಳು ಮತ್ತು ಸಾಂಸ್ಕೃತಿಕ ಆಶಯಗಳಿರುತ್ತವೆ. ಅವುಗಳನ್ನು ಗ್ರಹಿಸುವ ಪ್ರಜ್ಞೆ ನಾಟಕಕಾರ ಮತ್ತು ನಿರ್ದೇಶಕರಿಗಿರಬೇಕು. ಆಧುನಿಕ ರಂಗಭೂಮಿಯಲ್ಲಿ ನಾಟಕವೆಂಬುದು ನಿರಂತರ ಪ್ರಯೋಗದ ಪ್ರಕ್ರಿಯೆಯಾಗಿದ್ದು, ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತು ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಅವಕಾಶ ಕಲ್ಪಿಸುತ್ತದೆ ಎಂದರು.
ಮಕ್ಕಳಲ್ಲಿ ಪ್ರಶ್ನಿಸುವ ಗುಣವನ್ನು ಬೆಳೆಸುವ ನಿಟ್ಟಿನಲ್ಲಿ ಪಠ್ಯವಿಷಯಗಳನ್ನೇ ನಾಟಕದ ರೂಪಕ್ಕೆ ಪರಿವರ್ತಿಸುವ ಪ್ರಯೋಗಗಳು ನಡೆಯುತ್ತಿವೆ. ದ್ಯುತಿಸಂಶ್ಲೇಷಣೆ, ಮಸೂರಗಳ ಕಾರ್ಯವಿಧಾನ ಸೇರಿದಂತೆ ವಿಜ್ಞಾನದ ಸಂಕೀರ್ಣ ಪರಿಕಲ್ಪನೆಗಳನ್ನು ರಂಗಭೂಮಿಯ ಮೂಲಕ ಸರಳವಾಗಿ ಮನದಟ್ಟು ಮಾಡಿಸಬಹುದು. ಇಂತಹ ಪ್ರಯೋಗಗಳು ವಿಜ್ಞಾನವನ್ನು ಮಕ್ಕಳಿಗೆ ಆಪ್ತವಾಗಿಸುವುದರ ಜೊತೆಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸುತ್ತವೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಿಗೆ ಪೂರಕವಾಗಿ ಮಕ್ಕಳಿಗಾಗಿ ಇನ್ನಷ್ಟು ವಿಜ್ಞಾನ ನಾಟಕಗಳು ರಚನೆಯಾಗಬೇಕಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಮಾತನಾಡಿ, ಜ್ಞಾನದ ಬೆಳಕನ್ನು ರಂಗಭೂಮಿಯ ಮೂಲಕ ಮಕ್ಕಳ ಮನಸ್ಸಲ್ಲಿ ಬೆಳಗಿಸುವ ಸೃಜನಶೀಲ ಪ್ರಯತ್ನಕ್ಕೆ ಇಂತಹ ವೇದಿಕೆ ಸಾಕ್ಷಿಯಾಗಿದೆ. ವಿಜ್ಞಾನವು ಮಾನವ ಬದುಕಿನ ಪ್ರಗತಿಗೆ ದಾರಿದೀಪವಾಗಿದ್ದರೂ, ಅದರ ಬಳಕೆಯಲ್ಲಿ ಮಾನವೀಯತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಅಷ್ಟೇ ಮಹತ್ವದ್ದಾಗಿವೆ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ, ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.
ಬ್ಲಾಕ್ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಇಮ್ತಿಯಾಜ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ಧನಂಜಯ ಎನ್., ರಾಜಪ್ಪ, ಶಶಿರೇಖಾ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಉಪನ್ಯಾಸಕರಾದ ಚೈತ್ರ ಮತ್ತು ಗೌರಿಶಂಕರ್ ಭಾಗವಹಿಸಿದ್ದರು.
ಶಿಕ್ಷಕಿ ಯಮುನಾ ಕಾರ್ಯಕ್ರಮ ನಿರೂಪಿಸಿ, ಮುಫೀಸ್ ಸ್ವಾಗತಿಸಿ, ಹೊನ್ನೇಶಪ್ಪ ವಂದಿಸಿದರು.
👑

JOIN OUR COMMUNITY

✈️
Get Latest Updates, News, Offers & More
Spread the love
ಮುಖ್ಯ ಸಂಪಾದಕರು (Chief Editor) ✍️ 326 ಲೇಖನಗಳು

Abhi

Abhi ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment