ಶಿವಮೊಗ್ಗ :- ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಖ್ಯಾತ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ. ಗೀತಾರವಿ ಹಾಗೂ ಡಾ. ಅಮಿತಾ ಹೆಗ್ಡೆಯವರ ಸೇವೆ ಇನ್ನು ಮುಂದೆ ದೊರೆಯಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪೃಥ್ವಿ ಬಿ.ಸಿ. ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಖ್ಯಾತ ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರುಗಳಾದ ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆಯವರು ಸುಮಾರು ಮೂವತ್ತೈದು ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿದ್ದು, ೨೦ ವರ್ಷಗಳಿಂದ ನೋವು ರಹಿತ ಹೆರಿಗೆಯಲ್ಲಿ ವಿಶೇಷ ಪರಿಣಿತರಾಗಿರುತ್ತಾರೆ. ಅಲ್ಲದೇ ಬಂಜೆತನ ನಿವಾರಣೆ ಹಾಗೂ ಲ್ಯಾಪ್ರೊಸ್ಕೋಪಿಕ್ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಈ ವೈದ್ಯರು ಗಳು ಇದೀಗ ಪೂರ್ಣಾವಧಿಯಾಗಿ ಮಾತೃವಾತ್ಸಲ್ಯ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ಹಲವು ಖಾಸಗಿ ವಿಮಾ ಸೌಲಭ್ಯಗಳು ಕೂಡ ಜಾರಿಯಲ್ಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳ ಬಹುದು ಎಂದರು.
ವಿಶೇಷವಾಗಿ ರೋಗಿಗಳಿಗಾಗಿ ರಿಯಾಯಿತಿಯ ‘ಮಾತೃವಾತ್ಸಲ್ಯ ಆರೋಗ್ಯ ಕಾರ್ಡ್’ ಜಾರಿಗೊಳಿಸ ಲಾಗಿದ್ದು, ಆಸಕ್ತರು ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದ ಅವರು ಈ ಕಾರ್ಡ್ ಮೂಲಕ ಒಳರೋಗಿ ಹಾಗೂ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ರಿಯಾಯಿತಿ ಪಡೆಯಬಹುದು ಎಂದರು.
ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆರವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಾ. ನಾಗಮಣಿ ಎಂ.ಸಿ. ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಉಪಸ್ಥಿತರಿದ್ದರು.


