<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಆದರ್ಶ ಕಾಲೋನಿಗೆ ಕಾಂತೇಶ್ ಭೇಟಿ, ಮಳೆಹಾನಿ ಪರಿಶೀಲನೆ

Banner Ad
ಆದರ್ಶ ಕಾಲೋನಿಗೆ ಕಾಂತೇಶ್ ಭೇಟಿ, ಮಳೆಹಾನಿ ಪರಿಶೀಲನೆ

ಶಿವಮೊಗ್ಗ :- ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ವಾರ್ಡ್ ನಂ. 7ರ ಆದರ್ಶ ಕಾಲೋನಿಯಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮೀ ಮತ್ತು ಯುವ ಮುಖಂಡ ಕೆ.ಈ. ಕಾಂತೇಶ್ ಇಂದು ಬೆಳಿಗ್ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಾಲೋನಿಯ ಮಳೆಹಾನಿಗೊಳಗಾದ ನಿವಾಸಿಗಳ ಸಮಸ್ಯೆಗಳನ್ನು ವಿಚಾರಿಸಿದರು. ಇಲ್ಲಿ ರಾಜಕಾಲುವೆ ಮತ್ತು ೩ ಚರಂಡಿಗಳು ಸಂಪೂರ್ಣ ಮಳೆ ನೀರಿನಿಂದ ಉಕ್ಕಿ ಹರಿದು, ಸುಮಾರು 25-30 ಮನೆಗಳ ಒಳಗೆ 5-6 ಅಡಿ ಮಳೆ ನೀರು ನುಗ್ಗಿ ಹಾನಿಗೊಳಗಾದ ಬಗ್ಗೆ ವಿಚಾರಿಸಿ ತಿಳಿದುಕೊಂಡರು.

ಪ್ರತಿ ವರ್ಷ ಅತಿಯಾದ ಮಳೆಯಿಂದಾಗಿ ಆದರ್ಶ ಕಾಲೋನಿ ನಿವಾಸಿಗಳಿಗೆ ಹಾನಿ ಸಂಬಂವಿಸುತ್ತಿತ್ತು, ಕೂಡಲೇ ಆದರ್ಶ ಕಾಲೋನಿಯ 2ಡೆತ್ ಸ್ಟ್ರಾಬ್ ಗಳನ್ನ ಕನಿಷ್ಠ 2ಅಡಿ ಎತ್ತರಕ್ಕೆ ಎರಿಸಿ ನಮಸ್ಯೆಯನ್ನು ಬಗೆಹರಿಸಲು ಕಾಂತೇಶ್ ರವರು ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮೀ ಅವರಿಗೆ ಹೇಳಿದರು.

ಈ ಸಂದರ್ಭದಲ್ಲಿ ಹೋರಾಟಗಾರರಾದ ಕಲ್ಲೂರು ಮೇಘರಾಜ, ಕೆ ನಾಗರಾಜ, ಶ್ರೀಮತಿ ಜಯಮ್ಮ, ಶ್ರೀಮತಿ ಲತಾ, ಶ್ರೀಮತಿ ರಶ್ಮಿ, ಪೂವಯ್ಯ ಮುಂತಾದವರು ಹಾಜರಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *