<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ದ್ವಿತೀಯ ಪಿಯುಸಿಯಲ್ಲಿ ಕಳೆದ ಬಾರಿಗಿಂತ ಶೇ. 10ರಷ್ಟು ಹೆಚ್ಚು ಫಲಿತಾಂಶ: ಶಿವಮೊಗ್ಗ ಜಿ.ಪಂ ಸಿಇಓ ಹೇಮಂತ್ ಮಾಹಿತಿ

Banner Ad
ದ್ವಿತೀಯ ಪಿಯುಸಿಯಲ್ಲಿ ಕಳೆದ ಬಾರಿಗಿಂತ ಶೇ. 10ರಷ್ಟು ಹೆಚ್ಚು ಫಲಿತಾಂಶ: ಶಿವಮೊಗ್ಗ ಜಿ.ಪಂ ಸಿಇಓ ಹೇಮಂತ್ ಮಾಹಿತಿ

ಶಿವಮೊಗ್ಗ :- ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ ಶಿವಮೊಗ್ಗ ಜಿಲ್ಲೆಯು ಶೇ. 87.62 ಫಲಿತಾಂಶ ಪಡೆದಿದ್ದು ಕಳೆದ ಬಾರಿಗಿಂತ ಶೇ.10 ರಷ್ಟು ಹೆಚ್ಚು ಫಲಿತಾಂಶ ಪಡೆಯುವ ಮೂಲಕ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಜಿ.ಪಂ ಸಿಇಓ ಹೇಮಂತ್ ಎನ್ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆ – 1 ಫಲಿತಾಂಶ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿ, 2024-25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ.79.91 ಫಲಿತಾಂಶ ಬಂದಿದ್ದು, ಈ ಸಾಲಿನಲ್ಲಿ ಶೇ.87.62 ಫಲಿತಾಂಶ ಪಡೆಯಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 17532 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 15361 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 10123 ಬಾಲಕಿಯರಲ್ಲಿ 9432 ಅಂದರೆ ಶೇ.93 ಬಾಲಕಿಯರು ಪಾಸಾಗಿದ್ದಾರೆ. ಪರೀಕ್ಷೆ ಬರೆದ 7409 ಬಾಲಕರಲ್ಲಿ 5929 ಬಾಲಕರು ಅಂದರೆ ಶೇ.81 ಬಾಲಕರು ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ 3637 ರಲ್ಲಿ 2701 , ವಾಣಿಜ್ಯ ವಿಭಾಗದಲ್ಲಿ 5865 ರಲ್ಲಿ 5139, ವಿಜ್ಞಾನ ವಿಭಾಗದಲ್ಲಿ 8030 ರಲ್ಲಿ 7521 ಪಾಸಾಗಿದ್ದಾರೆ. ನಗರ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 10084 ವಿದ್ಯಾರ್ಥಿಗಳಲ್ಲಿ 8721 ಹಾಗೂ ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೆ ಹಾಜರಾದ 7448 ವಿದ್ಯಾರ್ಥಿಗಳಲ್ಲಿ 6640 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಫಲಿತಾಂಶ ವಿವರ : ಜಿಲ್ಲೆಯಲ್ಲಿ ಉನ್ನತ ಶ್ರೇಣಿ 4622, ಪ್ರಥಮ ದರ್ಜೆ 8308, ದ್ವಿತೀಯ ದರ್ಜೆ 1841 ಮತ್ತು 639 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ತಾಲ್ಲೂಕುವಾರು ತೀರ್ಥಹಳ್ಳಿ ತಾಲ್ಲೂಕು ಉನ್ನತಶ್ರೇಣಿ 381, ಪ್ರಥಮ ದರ್ಜೆ 519, ದ್ವಿತೀಯ ದರ್ಜೆ 121, ಪಾಸು 26, ಶೇ.93.73 ಫಲಿತಾಂಶದೊAದಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹೊಸನಗರ ಉನ್ನತ ಶ್ರೇಣಿ 177, ಪ್ರಥಮ ದರ್ಜೆ 469, ದ್ವಿತೀಯ ದರ್ಜೆ 103, ಪಾಸು 22 ಶೇ.93 ದ್ವಿತೀಯ ಸ್ಥಾನ. ಶಿವಮೊಗ್ಗ ಉನ್ನತ ಶ್ರೇಣಿ 2541, ಪ್ರಥಮ ದರ್ಜೆ 3379, ದ್ವಿತೀಯ ದರ್ಜೆ 522, ಪಾಸು 198, ಶೇ.91.28 ಮೂರನೇ ಸ್ಥಾನ. ಭದ್ರಾವತಿ ಉನ್ನತ ಶ್ರೇಣಿ 433, ಪ್ರಥಮ ದರ್ಜೆ 1046, ದ್ವಿತೀಯ ದರ್ಜೆ 292, ಪಾಸು 128 ಶೇ.84.55 ಫಲಿತಾಂಶ ಲಭಿಸಿದೆ. ಸಾಗರ ಉನ್ನತ ಶ್ರೇಣಿ 362, ಪ್ರಥಮ ದರ್ಜೆ 1070, ದ್ವಿತೀಯ ದರ್ಜೆ 307, 97 ಪಾಸು, ಶೇ83.99 ಫಲಿತಾಂಶ. ಸೊರಬ ಉನ್ನತ ಶ್ರೇಣಿ 147, ಪ್ರಥಮ ದರ್ಜೆ 759, ದ್ವಿತೀಯ ದರ್ಜೆ 256, ಪಾಸು 66, ಶೇ 83.14 ಫಲಿತಾಂಶ. ಶಿಕಾರಿಪುರ ಉನ್ನತಶ್ರೇಣಿ 581, ಪ್ರಥಮ ದರ್ಜೆ 1066, ದ್ವಿತೀಯ ದರ್ಜೆ 240, 102 ಪಾಸು ಶೇ.81.75 ಫಲಿತಾಂಶ ಲಭಿಸಿದೆ.

ಸರ್ಕಾರಿ ಶಾಲೆಗಳಲ್ಲಿ ಉನ್ನತ ಶ್ರೇಣಿ 895, ಪ್ರಥಮ ದರ್ಜೆ 3551, ದ್ವಿತೀಯ ದರ್ಜೆ 1179, ಪಾಸು 421, ಶೇ.81.01 ಫಲಿತಾಂಶ ಲಭಿಸಿದೆ. ಅನುದಾನಿತ ಶಾಲೆಗಳಲ್ಲಿ ಉನ್ನತ ಶ್ರೇಣಿ 547 ಪ್ರಥಮ ದರ್ಜೆ 1398, ದ್ವಿತೀಯ ದರ್ಜೆ 348, ಪಾಸು 169, ಶೇ.81.01 ಫಲಿತಾಂಶ ಲಭಿಸಿದೆ. ಅನುದಾನಿತರಹಿತ ಶಾಲೆಗಳಲ್ಲಿ ಉನ್ನತ ಶ್ರೇಣಿ 2971 ಪ್ರಥಮ ದರ್ಜೆ 3298, ದ್ವಿತೀಯ ದರ್ಜೆ 310, ಪಾಸು 49, ಶೇ.96.74 ಫಲಿತಾಂಶ ಲಭಿಸಿದೆ. ವಸತಿ ಶಾಲೆಗಳಲ್ಲಿ ಉನ್ನತ ಶ್ರೇಣಿ 209, ಪ್ರಥಮ ದರ್ಜೆ 121, ದ್ವಿತೀಯ ದರ್ಜೆ 04, ಪಾಸು 0, ಶೇ.99.11 ಫಲಿತಾಂಶ ಲಭಿಸಿದೆ. ಮುಂದಿನ ವರ್ಷ ಶೇ.90 ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಶೇ.100 ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜುಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *