<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಕಾಂಗ್ರೆಸ್‌ಗೆ ಎಸ್.ಪಿ. ದಿನೇಶ್ ಮರು ಸೇರ್ಪಡೆ

Banner Ad
ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಕಾಂಗ್ರೆಸ್‌ಗೆ ಎಸ್.ಪಿ. ದಿನೇಶ್ ಮರು ಸೇರ್ಪಡೆ

ಶಿವಮೊಗ್ಗ :- ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಎಸ್.ಪಿ.ದಿನೇಶ್ ಅವರನ್ನು ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಉಚ್ಛಾಟನೆಯನ್ನು ರದ್ದುಗೊಳಿಸಿ ಪಕ್ಷಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್.ಪಿ.ದಿನೇಶ್ ಅವರು ಈ ಹಿಂದೆ ನೈರುತ್ಯ ಪದವೀಧರ ಕ್ಷೇತ್ರದಿಂದ ಬಂಡಾಯವಾಗಿ ಸ್ಪರ್ಧಿಸಿದ್ದರು. ಇದರಿಂದ ಅವರನ್ನು ಸಹಜವಾಗಿಯೇ ಪಕ್ಷದಿಂದ ೬ ವರ್ಷಗಳ ಕಾಲ ಉಚ್ಛಾಟಿಸಲಾಗಿತ್ತು. ಅವರು ಪಕ್ಷಕ್ಕಾಗಿ ದುಡಿದಿದ್ದರು ನಿಜ. ಆದರೆ ದುಡುಕು ನಿರ್ಧಾರ ತೆಗೆದುಕೊಂಡಿದ್ದರು. ನಾವು ಕೂಡ ಅವರಿಗೆ ಸ್ಪರ್ಧೆ ಬೇಡ ಎಂದು ಹೇಳಿದ್ದೇವು, ಆದರೆ ಅವರು ಒಂದು ವರ್ಷದಿಂದ ತಯಾರಿ ಮಾಡಿಕೊಂಡು ಬಿಟ್ಟಿದ್ದರು. ಹಾಗಾಗಿ ಸ್ಪರ್ಧೆ ಮಾಡಿದ್ದರು ಎಂದರು.

ಈಗ ಬದಲಾದ ನಿರ್ಧಾರದಿಂದ ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರ ನಿರ್ದೇಶನದ ಮೇರೆಗೆ ಅವರನ್ನು ಪುನಃ ಇಂದು ಪಕ್ಷದ ಕಚೇರಿಯಲ್ಲಿ ಸ್ವಾಗತಿಸಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಾಗಿದೆ. ಯಾವ ಷರತ್ತುಗಳಿಲ್ಲದೆ ಸೇರ್ಪಡೆಗೊಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಪಿ. ದಿನೇಶ್ ಅವರು, ಯಾವ ಬೇಷರತ್ತು ಬೇಡಿಕೆ ಇಲ್ಲದೆ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಂಡಿದ್ದೇನೆ. ಕಳೆದ ೩೦ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ವಿದ್ಯಾರ್ಥಿ ಸಂಘಟನೆಯ ಮೂಲಕ ಪಕ್ಷಕ್ಕೆ ಪಾದಾರ್ಪನೆಗೊಂಡಿದ್ದೆ. ಕೆಲವು ಅನಿರ್ವಾಯ ಕಾರಣಗಳಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾದ ಸಂದರ್ಭ ಒದಗಿ ಬಂತು. ಈಗ ಪಕ್ಷದ ಹೈಕಮಾಂಡ್ ನಿರ್ಧಾರದ ಮೇರೆಗೆ ನಾನು ಪುನಃ ಪಕ್ಷಕ್ಕೆ ಮರಳಿದ್ದೇವೆ. ಪಕ್ಷಕ್ಕಾಗಿ ಹಿಂದೆಯೂ ದುಡಿದಿದ್ದೆ, ಮುಂದೆಯೂ ದುಡಿಯುತ್ತೇನೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ನಿಗಮಗ ಮಂಡಳಿಯ ಅಧ್ಯಕ್ಷರಾದ ಚೇತನ್ ಕೆ. ಗೌಡ, ಜಿ. ಪಲ್ಲವಿ, ಪ್ರಮುಖರಾದ ಕಲಗೋಡು ರತ್ನಾಕರ್, ಕಲೀಂ ಪಾಷ, ಶಿವಣ್ಣ, ಎಸ್.ಟಿ. ಹಾಲಪ್ಪ, ಮಧುಸೂಧನ್, ವಿಜಯಲಕ್ಷ್ಮೀ ಪಾಟೀಲ್, ಸುವರ್ಣ ನಾಗರಾಜ, ಭಾರತಿ ರಾಮಕೃಷ್ಣ, ಯು.ಶಿವಾನಂದದ, ಸಯ್ಯದ್ ಅಡ್ಡು ಇನ್ನಿತರರು ಇದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *