
ಶಿವಮೊಗ್ಗ :- ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕು ಎಂದು ಸವಳಂಗ ರಸ್ತೆಯಲ್ಲಿರುವ ಆರ್ಯ ಪಿಯು ವಿಜನ ಕಾಲೇಜಿನ ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್ ತಿಳಿಸಿದರು.
ಅವರು ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮಾಚರಣೆ ನಿಮಿತ್ತ ವಿದ್ಯಾರ್ಥಿಗಳು, ಆಡಳಿತ ಮಂಡಳಿ, ಉಪನ್ಯಾಸ ವರ್ಗದವರು ಮಹಾನಗರ ಪಾಲಿಕೆಯ ಆವರಣಕ್ಕೆ ತೆರಳಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಅಂಬೇಡ್ಕರ್ ಪ್ರತಿಮೆಗೆ ನಮಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಸಂವಿಧಾನವೇ ನಮ್ಮ ಪವಿತ್ರ ಗ್ರಂಥ ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಉದ್ದೇಶದಿಂದ ನಮ್ಮ ಕಾಲೇಜಿನ ಮಕ್ಕಳನ್ನು ಪಾಲಿಕೆ ಆವರಣಕ್ಕೆ ಕರೆತಂದಿದ್ದೇವೆ. ಇಲ್ಲಿ ಜಿಲ್ಲಾಡಳಿತ, ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಶಿಷ್ಟ ರೀತಿಯ ಅಂಬೇಡ್ಕರ್ ಜಯಂತಿಯ ಬಗ್ಗೆ ಮಕ್ಕಳು ಕೌತುಕರಾಗಿದ್ದಾರೆ. ಮಹಾ ಪುರುಷರ ಜಯಂತಿಗಳು ವಿದ್ಯಾರ್ಥಿಗಳಲ್ಲಿ ಜನದ ಅರಿವನ್ನು ಹೆಚ್ಚಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ದಸಂಸ ಮುಖಂಡ ಗುರುಮೂರ್ತಿ, ಆರ್ಯ ಪಿಯು ಕಾಲೇಜಿನ ಪ್ರಾಂಶುಪಾಲರು, ಭೋದಕ-ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ರಂಗಸ್ವಾಮಿ ವಂದಿಸಿದರು. ಓಬಳೇಶ್ ಟಿ. ನಿರೂಪಿಸಿದರು. ಡಾ. ವಾಲ್ಮೀಕಿ, ಡಾ. ರ್‍ಜಾZನಾಯ್ಕ ಉಪಸ್ಥಿತರಿದ್ದರು.



