
ಶಿವಮೊಗ್ಗ :- ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ಅಂಬೇಡ್ಕರ್ ಭವನದಿಂದ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್‌ವರೆಗೆ ಕಂಬ ತೆರವುಗೊಳಿಸುವ ಕಾಮಗಾರಿ ಇರುವುದರಿಂದ ಈ ಭಾಗದಲ್ಲಿ ಏ. 18 ರ ಶನಿವಾರದಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ.

ಕಸ್ತೂರಬಾ ರಸ್ತೆ, ಮಹಾನಗರ ಪಾಲಿಕೆ, ವೀರಶೈವ ಕಲ್ಯಾಣ ಮಂಟಪ ಹತ್ತಿರ, ಅಂಬೇಡ್ಕರ್ ರಸ್ತೆ, ನೆಹರು ರಸ್ತೆ, ಬಸವಸದನ ಹತ್ತಿರ, ಕಲ್ಯಾಣ ಜ್ಯುವೆಲರಿ, ವೆಂಕಟೇಶ್ವರ ಸ್ವೀಟ್ ಹೌಸ್, ಶಿವಪ್ಪ ನಾಯಕ ಸರ್ಕಲ್, ಹೂ ಮಾರುಕಟ್ಟೆ, ಗಾಂಧಿಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸು ವಂತೆ ಮೆಸ್ಕಾಂ ತಿಳಿಸಿದೆ.



