<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಜೆ.ಎನ್.ಎನ್.ಸಿ.ಇ ಪಿಜಿ ಗ್ರಾಜುಯೇಷನ್ ಡೇ : ಎನ್ಇಎಸ್ ಚಿನ್ನದ ಪದಕ ಪ್ರದಾನ

Banner Ad
ಜೆ.ಎನ್.ಎನ್.ಸಿ.ಇ ಪಿಜಿ ಗ್ರಾಜುಯೇಷನ್ ಡೇ : ಎನ್ಇಎಸ್ ಚಿನ್ನದ ಪದಕ ಪ್ರದಾನ

ಶಿವಮೊಗ್ಗ :- ಜಗತ್ತಿಗೆ ಕೇವಲ ಕೌಶಲ್ಯವಂತ ವೃತ್ತಿಪರರು ಮಾತ್ರವಲ್ಲ, ಸಿದ್ಧಾಂತಬದ್ಧ ನಾಯಕರು ಮತ್ತು ಸಹಾನುಭೂತಿಯ ನಾಗರಿಕರ ಅಗತ್ಯವಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಉಜ್ವಲ‌.ಯು.ಜೆ ಹೇಳಿದರು.
ನಗರದ ಜೆ‌.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 2023-25 ನೇ ಸಾಲಿನ ಎಂಬಿಎ, ಎಂಸಿಎ, ಎಂಟೆಕ್ ಸ್ನಾತಕೋತ್ತರ ಪದವಿಧರರ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀವು ಪಡೆಯುವ ಪದವಿಯು, ಜೀವನದಲ್ಲಿ ಹೊಸ ಅಧ್ಯಾಯವೆಂಬ ಪ್ರಾರಂಭದ ಮುನ್ಸೂಚನೆ. ಬಿಎಂಡಬ್ಲೂ ಅಥವಾ ಮಾರುತಿ ಓಡಿಸಿದರೂ, ರಸ್ತೆ ಎಂಬುದು ಒಂದೇ ಆಗಿರುತ್ತದೆ. ಟೈಟನ್ ಅಥವಾ ರೋಲೆಕ್ಸ್ ಧರಿಸಿದರೂ, ಕಾಲ ಎಂಬುದು ಒಂದೇ ರೀತಿಯಲ್ಲಿ ಸಾಗುತ್ತದೆ ಎಂಬ ವಾಸ್ತವತೆಯನ್ನು ಅರಿಯಿರಿ. ನೀವು ಧರಿಸುವ ಲೇಬಲ್‌ಗಳು ಅಥವಾ ಹೊಂದುವ ಹುದ್ದೆಗಳಿಗಿಂತ, ಅನುಸರಿಸುವ ಮೌಲ್ಯಗಳು ಮತ್ತು ಸೌಜನ್ಯತೆ ಬದುಕಿನ ಉನ್ನತಿಗೆ ಮುಖ್ಯ.
ಬದುಕಿನ ಯಶಸ್ಸಿನ ಹಾದಿಯಲ್ಲಿ, ನೈತಿಕತೆಯನ್ನು ದಾರಿದೀಪವನ್ನಾಗಿಸಿಕೊಳ್ಳಿ. ಕುತೂಹಲವನ್ನು ನಿರಂತರ ಕಲಿಕೆಯ ಇಂಧನವಾಗಿಸಿಕೊಳ್ಳಿ. ಅನಿಶ್ಚಿತತೆಯ ಸಮಯದಲ್ಲಿ ಧೈರ್ಯವನ್ನು ಬೆಳೆಸಿಕೊಳ್ಳುವ ಮೂಲಕ, ವಿನಯವು ಜೀವನಪೂರ್ಣ ಕಲಿಕೆಯ ನೆನಪಾಗಿ ಉಳಿಯಲಿ ಎಂದು ಹಾರೈಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅನುಷ್ಠಾನದೊಂದಿಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣದಲ್ಲಿ ಪರಿವರ್ತನಾತ್ಮಕ ಹಂತವನ್ನು ಆರಂಭಿಸಿದೆ. ಇದರಲ್ಲಿ ಪ್ರಮುಖವಾಗಿ ಕೌಶಲ್ಯ ಆಧಾರಿತ ಮತ್ತು ಸಮಗ್ರ (Holistic) ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಸಾಮರ್ಥ್ಯಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಹೆಚ್ಚಿಸುವತ್ತ ಕೇಂದ್ರಿಕರಿಸಲಾಗಿದೆ ಎಂದು ಹೇಳಿದರು.
ಎನ್ಇಎಸ್ ಚಿನ್ನದ ಪದಕ ಪ್ರದಾನ
ವಿಟಿಯು ವ್ಯಾಪ್ತಿಯ ಎಂಬಿಎ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿ ಪಾರ್ವತಿ.ಜೆ. ಸಾಲೇರ ಅವರಿಗೆ ಎನ್ಇಎಸ್ ಸಂಸ್ಥೆಯ ಅಮೃತಮಹೋತ್ಸವದ ಸ್ಮರಣಾರ್ಥವಾಗಿ ಕೊಡಮಾಡುವ, ಎನ್ಇಎಸ್ ಚಿನ್ನದ ಪದಕ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ಎಂಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಪಡೆದ ಸಂಜಯ್.ಎಂ.ವಿ ಅವರನ್ನು ಸನ್ಮಾನಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಕಾರ್ಯದರ್ಶಿ ಎಸ್.ಎನ್. ನಾಗರಾಜಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ. ಸತ್ಯನಾರಾಯಣ, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಸಿ. ಶ್ರೀಕಾಂತ್, ಎಂಸಿಎ ವಿಭಾಗದ ಮುಖ್ಯಸ್ಥ ಡಾ. ಹೇಮಂತ್ ಕುಮಾರ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಜಲೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಅನುಶ್ರೀ ಪ್ರಾರ್ಥಿಸಿ, ಡಾ. ವಿಕ್ರಮ್ನಿ ರೂಪಿಸಿದರು‌.
Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *